ಮಹಿಳೆಯರು ಯಶಸ್ಸಿಗೆ ಕೌಶಲ ರೂಢಿಸಿಕೊಳ್ಳಲಿ:ಕಾಂತಾ ನಾಯಕ್ ಸಲಹೆ
ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಿಳಾ ಸಹಕಾರ ವಿಭಾಗದಿಂದ ನಗರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾಯಕ್ರಮದಲ್ಲಿ ಮಹಿಳೆಯರಿಗೆ ಬಾಗಿನ ನೀಡಲಾಯಿತು. ಎಸ್.ನಾರಾಯಣ್, ಬಿ.ಜೆ.ವಿಜಯಕುಮಾರ್, ಕಾಂತಾ ನಾಯಕ್,ತಾರಾ ಕುಮಾರ್, ಸಿದ್ದಯ್ಯ, ಸಂತೋಷ್, ಮಂಜುನಾಥ್, ಗೋಪಿನಾಥ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಿಗಮದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ
ಕೌಶಲ ರೂಢಿಸಿಕೊಳ್ಳುವುದು ಅಗತ್ಯ. ಆ ಮೂಲಕ ತಮ್ಮ ಆರ್ಥಿಕಬಲ ಹೆಚ್ಚಿಸಿಕೊಳ್ಳಬಹುದು
ಮೈಸೂರು:ಸ್ವಾವಲಂಬಿಗಳಾಗಲು ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ಮಹಿಳೆಯರು ಕೌಶಲ ರೂಢಿಸಿಕೊಳ್ಳುವುದು ಅಗತ್ಯ ಎಂದು ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಿಳಾ ಸಹಕಾರ ವಿಭಾಗದಿಂದ ಶುಕ್ರವಾರ ನಗರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಸಹಕಾರ ಸಮ್ಮೇಳನ ಹಾಗೂ ಬಾಗಿನ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ನಿಗಮದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆ ತಲುಪಿಸುವ ಕೆಲಸ ಮಾಡುತ್ತಿರುವೆ. ಅದನ್ನು ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಅದಕ್ಕೆ ಕೌಶಲ ರೂಢಿಸಿಕೊಳ್ಳುವುದು ಅಗತ್ಯ. ಆ ಮೂಲಕ ತಮ್ಮ ಆರ್ಥಿಕಬಲ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಬದುಕಿನಲ್ಲಿ ಸಂಬಂಧ ಮುಖ್ಯ. ಅರ್ಥ ಮಾಡಿಕೊಂಡಷ್ಟು ಗಟ್ಟಿಯಾಗುತ್ತದೆ. ಸ್ಥಿರವಾದ ಸಂಬಂಧ ಉಳಿಸಿಕೊಂಡಾಗ ಮಾತ್ರ ರಾಜಕಾರಣದಲ್ಲಿ ಯಶಸ್ಸು ಸಾಧ್ಯ ಎಂದರು.
ಮಹಿಳೆಯರಿಗೆ ಸಾಂಪ್ರದಾಯಿಕ ಬಾಗಿನ ನೀಡಲಾಗುತ್ತಿರುವುದು ವಿಶೇಷ. ಬಾಗಿನ ಅರ್ಪಿಸುವುದು ಶುಭ ಕಾಣಿಕೆ. ಇದು ಸಮೃದ್ಧಿ ಮತ್ತು ಸೌಭಾಗ್ಯದ ಸಂಕೇತವಾಗಿದ್ದು, ಮಹಿಳೆಯರೆಲ್ಲರೂ ಒಟ್ಟಾಗಿ ಸಂಭ್ರಮಿಸುವ ದಿನವಾಗಿದೆ ಎಂದರು.
ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ತಾರಾ ಕುಮಾರ್ ಮಾತನಾಡಿ, ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಮಹಿಳಾ ಸಬಲೀಕರಣ ಆಚರಿಸಲು ಹಾಗೂ ಸಾಂಪ್ರದಾಯಿಕ ಮತ್ತು ಆರ್ಥಿಕ ಶಕ್ತಿ ಒಟ್ಟುಗೂಡಿಸಲು ಆಯೋಜಿಸಲಾಗಿರುವ ಸಮಾವೇಶ ಇದಾಗಿದೆ ಎಂದರು.
ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್ ಉದ್ಘಾಟಿಸಿದರು. ಸಹಕಾರ ವಿಭಾಗದ ಜಿಲ್ಲಾಧ್ಯಕ್ಷ ಸಿದ್ದಯ್ಯ, ಕಾರ್ಯಾಧ್ಯಕ್ಷ ಸಂತೋಷ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕ ಹಾಗೂ ಚಮ್ಮಾರಿಕೆ ಮಹಿಳೆಯರಿಗೆ ಬಾಗಿನ ನೀಡಲಾಯಿತು.