ಕೃಷಿ ಮೇಳದಲ್ಲಿ ಮಾಹಿತಿ ಪಡೆದ ಮಹಿಳೆಯರು

ಕೃಷಿ ಮೇಳಕ್ಕೆ ತೆರಳಿದ್ದ ರೈತ ಮಹಿಳೆಯರು
ಕೃಷಿ ಮೇಳಕ್ಕೆ ತೆರಳಿದ್ದ ರೈತ ಮಹಿಳೆಯರು
Published on
ಹುಣಸೂರು: ಮಂಡ್ಯದಲ್ಲಿ ನಡೆದ ಕೃಷಿ ಮೇಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಗಾವಡಗೆರೆ ಬಿ. ಕಾರ್ಯಕ್ಷೇತ್ರದ ಮಹಿಳೆಯರು ಕೃಷಿ, ತೋಟಗಾರಿಕೆ, ಮತ್ತಿತರ ಬೆಳೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೃಷಿ ಅಧ್ಯಯನ ಪ್ರವಾಸದ ಅಂಗವಾಗಿ ಕೃಷಿ ಮೇಳಕ್ಕೆ ತೆರಳಿದ್ದ ರೈತ ಮಹಿಳೆಯರು ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ಹಲಸು, ನೇರಳೆ, ತೆಂಗು ಬೆಳೆಗಳ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ ಭತ್ತದ ವಿವಿಧ ತಳಿಗಳು ಹಾಗೂ ಭತ್ತದ ಇಳುವರಿ, ಮೀನು, ಜೇನು, ಕುರಿ, ಕೋಳಿ, ಮೊಲ ಸಾಕಾಣೆ, ತರಕಾರಿ ಬೆಳೆ, ನರ್ಸರಿ, ಹನಿ ನೀರಾವರಿ ಪದ್ಧತಿ, ಕೃಷಿ ಹೊಂಡ ನಿರ್ಮಾಣ, ಯಂತ್ರೋಪಕರಣ ಬಳಕೆಯ ಬಗ್ಗೆ ಕೃಷಿ ಮೇಳದಲ್ಲಿ ಮಾಹಿತಿ ಪಡೆದರು. ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಸಾಧಕ ಕೃಷಿಕರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಎಲ್ಲ ಮಳಿಗೆಗಳಿಗೆ ಭೇಟಿ ನೀಡಿ ಆಧುನಿಕ ಕೃಷಿ, ನವ ನವೀನ ಯಂತ್ರೋಪಕರಣ ಬಗ್ಗೆ ತಿಳಿದುಕೊಂಡರು.
ಮೇಳದಲ್ಲಿ ಯೋಜನೆಯ ಕೃಷಿ ಮೇಲ್ವಚಾರಕ ಅಣ್ಣಪ್ಪ, ಸೇವಾ ಪ್ರತಿನಿಧಿ ಮಂಜುಳ ಸೇರಿದಂತೆ ವಿವಿಧ ಮಹಿಳಾ ಸಂಘಗಳ 21 ಮಂದಿ ಮಹಿಳೆಯರ ತಂಡ ಭಾಗವಹಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net