ತಂತ್ರಜ್ಞಾನದಿಂದ ಮನುಷ್ಯ ಕೂಡ ಈಗ ಸೃಷ್ಟಿಕರ್ತ..!

 ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ‘ವಾಣಿಜ್ಯ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಉದಯೋನ್ಮುಖ ಮಾದರಿಗಳು’ ವಿಷಯ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿತ್ತು. ಡಾ.ಡಿ. ಆನಂದ್,  ಡಾ.ಟಿ. ವಿಜಯಲಕ್ಷ್ಮೀ ಮುರಳೀಧರ್, ಡಾ.ಬಿ.ಆರ್. ಜಯಕುಮಾರಿ, ಡಾ.ಎಸ್.ಆರ್ ರಮೇಶ್, ಡಾ.ಟಿ.ಎಂ. ದೇವರಾಜ ಹಾಗೂ ಇತರರು ಇದ್ದರು.
ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ‘ವಾಣಿಜ್ಯ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಉದಯೋನ್ಮುಖ ಮಾದರಿಗಳು’ ವಿಷಯ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿತ್ತು. ಡಾ.ಡಿ. ಆನಂದ್, ಡಾ.ಟಿ. ವಿಜಯಲಕ್ಷ್ಮೀ ಮುರಳೀಧರ್, ಡಾ.ಬಿ.ಆರ್. ಜಯಕುಮಾರಿ, ಡಾ.ಎಸ್.ಆರ್ ರಮೇಶ್, ಡಾ.ಟಿ.ಎಂ. ದೇವರಾಜ ಹಾಗೂ ಇತರರು ಇದ್ದರು.
Published on
ಮೈಸೂರು: ತಂತ್ರಜ್ಞಾನದ ಬೆಳವಣಿಗೆಯಿಂದ ಮನುಷ್ಯನೇ ಸೃಷ್ಟಿಕರ್ತನಾಗಿದ್ದಾನೆ ಎಂದು ಬಿಎ ಬಹುದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಪ್ರಾಧ್ಯಾಪಕ ಡಾ.ಡಿ. ಆನಂದ್ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ‘ವಾಣಿಜ್ಯ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಉದಯೋನ್ಮುಖ ಮಾದರಿಗಳು’ ವಿಷಯದ ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿ, ಕೃತಕ ಬುದ್ಧಿಮತ್ತೆಯಿಂದ ಮನುಷ್ಯ ತನ್ನ ರೀತಿಯಲ್ಲಿಯೇ ಆಲೋಚಿಸುವ ಯಾಂತ್ರಿಕ ಜೀವಿಯನ್ನು ಸೃಷ್ಟಿಸುತ್ತಿದ್ದಾನೆ. ಈ ಯಾಂತ್ರಿಕ ಜೀವಿ ಮನುಷ್ಯ ಮಾಡುವ ಎಲ್ಲ ಕೆಲಸಗಳನ್ನು ಸಹ ಮಾಡುತ್ತದೆ. ಒಟ್ಟಾರೆ ಮನುಷ್ಯ ಈಗ ಸೃಷ್ಟಿಕರ್ತನಾಗಿದ್ದಾನೆ ಎಂದರು.
ಏನು ತಿಳಿಯದೆ ಇದ್ದರೂ ಎಲ್ಲವನ್ನೂ ಮಾಡಬಲ್ಲೆವು ಎಂಬ ಸ್ಥಿತಿಯನ್ನು ತಂತ್ರಜ್ಞಾನ ನಿರ್ಮಾಣ ಮಾಡಿದೆ. ಕೃತಕ ಬುದ್ಧಿಮತ್ತೆ ಬಳಸಿ ಎಷ್ಟೇ ಅದ್ಭುತಗಳನ್ನು ಸೃಷ್ಟಿಸಿದರೂ ಸಹ ಕೃತಕ ಬುದ್ಧಿಮತ್ತೆ ಎಂಬುದು ಮನುಷ್ಯನಿಗೆ ಪರ್ಯಾಯ ಅಲ್ಲ. ಕೃತಕ ಬುದ್ಧಿಮತ್ತೆಯು ಮಾನವೀಯತೆಯನ್ನು ಸಂಕುಚಿತಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಕೆಲವು ಕಂಪನಿಗಳು 500 ರಿಂದ 600 ಎಕರೆ ವಿಸ್ತಾರವಾದ ಜಾಗದಲ್ಲಿ ಹರಡಿಕೊಂಡಿದೆ. ಆದರೆ, ತಂತ್ರಜ್ಞಾನದ ಬದಲಾವಣೆ ಯಿಂದ ಮುಂದೊಂದು ದಿನ ಅಷ್ಟೊಂದು ದೊಡ್ಡ ಕ್ಯಾಂಪಸ್‌ನ ಅಗತ್ಯವೇ ಇರುವುದಿಲ್ಲ. ಕಾಲೇಜು ಶಿಕ್ಷಣದಲ್ಲೂ ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಇದ್ದು, ವರ್ಚುವಲ್ ಕಾಲೇಜುಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಒಟ್ಟಾರೆ ತಂತ್ರಜ್ಞಾನ ಎಲ್ಲ ಕಡೆಗಳಲ್ಲೂ ತನ್ನ ಪ್ರಾಬಲ್ಯ ಸಾಧಿಸುತ್ತಿದೆ ಎಂದರು.
ಪ್ರಸ್ತುತ ವಿವಿಧ ಕೌಶಲಗಳನ್ನು ಹೊಂದಿದರೆ ಮಾತ್ರ ಸಾಲದು ಎಐ ಕೌಶಲ ಕೂಡ ಅಗತ್ಯವಾಗಿದೆ. ಎಐ ಕೌಶಲ ತಿಳಿದಿಲ್ಲ ಎಂದರೆ ನಿಮಗೆ ಏನು ಗೊತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬದಲಾಗುತ್ತಿರುವ ಮಾರುಕಟ್ಟೆ ವ್ಯವಸ್ಥೆಗೆ ಹೊಂದಿಕೊಳ್ಳಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಜನ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮೀ ಮುರಳೀಧರ್, ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕಾಲೇಜಿನ ಸಿಇಒ ಡಾ.ಎಸ್.ಆರ್ ರಮೇಶ್, ಪ್ರಾಧ್ಯಾಪಕ ಡಾ.ಟಿ.ಎಂ. ದೇವರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net