ಮೈಸೂರಿನ ಹೊಸ ಬಸ್ ಮುಂದಿನ ಮಾರ್ಚ್‌ಗೆ ಪೂರ್ಣ?

ನಗರದಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ ಭರದಿಂದ ಸಾಗುತ್ತಿರುವುದು.
ನಗರದಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ ಭರದಿಂದ ಸಾಗುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಭರದಿಂದ ಸಾಗಿದೆ ಬಸ್ ನಿಲ್ದಾಣದ ಕಾಮಗಾರಿ
  • ಜನರಿಗೆ ದೊರಕಲಿದೆ ಸುಗಮ ಸಂಚಾರ ಸೌಲಭ್ಯ
  • ವಾಣಿಜ್ಯ ಮತ್ತು ಸೇವಾ ಕೇಂದ್ರವಾಗಿ ರೂಪಿಸುವ ಯೋಜನೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ನಗರದ ಬನ್ನಿಮಂಟಪದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಆಧುನಿಕ ಬಸ್ ನಿಲ್ದಾಣದ ಕಾಮಗಾರಿ ಬಿರುಸಿನಿಂದ ಸಾಗಿದ್ದು, ಇಲ್ಲಿಂದ ದೂರದ ಊರುಗಳಿಗೆ ಬಸ್‌ಗಳು ಸಂಚರಿಸಲಿವೆ. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಲಾಗುತ್ತದೆ.
ನಗರದ ಹದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ (ಸಬ್ ಅರ್ಬನ್) ಮೇಲಿನ ಒತ್ತಡ ಕಡಿಮೆ ವಾಡಲು ಬನ್ನಿಮಂಟಪದ ಡಿಪೋ ಜಾಗದಲ್ಲಿ ಇದು ತಲೆ ಎತ್ತುತ್ತಿದೆ. ಈ ನಿಲ್ದಾಣ ಕೇವಲ ಸಾರಿಗೆಗೆ ಸೀಮಿತವಾಗದೆ ಸಾರ್ವಜನಿಕರಿಗೆ ಸುಸಜ್ಜಿತ ವಾಣಿಜ್ಯ ಮತ್ತು ಸೇವಾ ಕೇಂದ್ರವಾಗಿ ರೂಪಿಸುವ ಯೋಜನೆಯೂ ಇದೆ. ಸಾರಿಗೆ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿ ನಿಗದಿತ ವೇಳೆಗೆ  ಪೂರ್ಣಗೊಂಡರೆ, ನಗರಕ್ಕೆ ಹೊಸ ಬಸ್ ನಿಲ್ದಾಣದ ಭಾಗ್ಯ ದೊರೆಯಲಿದೆ. 
ಕೆಎಸ್‌ಆರ್‌ಟಿಸಿಗೆ ಸೇರಿದ 61 ಎಕರೆಯಲ್ಲಿ 14 ಎಕರೆ ಜಾಗದಲ್ಲಿ 129 ಕೋಟಿ ರೂ.ದಲ್ಲಿ ಈ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಬುನಾದಿ ಕೆಲಸ ಪೂರ್ಣಗೊಂಡಿದ್ದು, ಕಾಂಕ್ರೀಟ್ ಚಾವಣಿ ಅಳವಡಿಕೆ ಕೆಲಸ ನಡೆಯುತ್ತಿದೆ. 
ಹೀಗೆ ವಿವಿಧ ಕಾಮಗಾರಿಗಳು ಏಕಕಾಲದಲ್ಲಿ ಮುನ್ನುತ್ತಿವೆ. ನಿರೀಕ್ಷಿತ ಮಟ್ಟದಲ್ಲಿ ಸಾಗಿದರೆ 2027ರ ವಾರ್ಚ್ ಹೊತ್ತಿಗೆ ಕೆಲಸ ಮುಗಿದು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. 
ನಿಲ್ದಾಣದ ಮುಂಭಾಗದಲ್ಲಿ ಬಸ್‌ಗಳ ಪ್ರವೇಶ ಮತ್ತು ನಿರ್ಗಮನ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಹೀಗಾಗಿ, ಇದರ ಎದುರಿನ ಸಯ್ಯಜಿರಾವ್ ರಸ್ತೆ ಮೇಲಿನ ಒತ್ತಡ ತಗ್ಗಿಸಿ, ವಾಹನ ದಟ್ಟಣೆೆ ಕಡಿಮೆ ವಾಡಲು ಯೋಜಿಸಲಾಗಿದೆ. ಬಸ್‌ಗಳ ಓಡಾಟಕ್ಕೆ ನಿಲ್ದಾಣದ ಹಿಂಭಾಗದಲ್ಲಿ ಪರ್ಯಾಯ ವಾರ್ಗ ಒದಗಿಸಲಾಗಿದೆ.

ದೂರದ ಊರಿಗೆ ಇಲ್ಲಿಯಿಂದಲೇ ಕಾರ್ಯಾಚರಣೆ:

ಕೆಎಸ್‌ಆರ್‌ಟಿಸಿ ಗ್ರಾವಾಂತರ ವಿಭಾಗದ ವ್ಯಾಪ್ತಿಗೆ ಬರುವ ನೂತನ ನಿಲ್ದಾಣವು ದೂರದ ಊರುಗಳಿಗೆ ಕ್ರಮಿಸ ಬೇಕಿರುವ ಬಸ್‌ಗಳ ತಾಣವಾಗಲಿದ್ದು, ಇಲ್ಲಿಯಿಂದಲೇ ಇವುಗಳು ಕಾರ್ಯಾಚರಣೆ ನಡೆಸಲಿವೆ. 
ಬೆಂಗಳೂರು, ರಾಮನಗರ, ಕೋಲಾರ, ತುಮಕೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ರಾಯಚೂರು, ಬೀದರ್, ಕಲಬುರಗಿಯಂತಹ ದೂರದ ಊರುಗಳಿಗೆ ಬಸ್‌ಗಳು ಇಲ್ಲಿಂದ ಜನರನ್ನು ಕರೆದೊಯ್ಯಲಿವೆ. ಕೇರಳ, ತಮಿಳುನಾಡು, ಆಂಧ್ರ, ಗೋವಾ ಕಡೆಗೆ ತೆರಳುವ ಬಸ್‌ಗಳು ಇಲ್ಲಿಂದ ಸಂಚರಿಸಲಿವೆ. 

ಸಬ್ ಅರ್ಬನ್  ನಿಲ್ದಾಣ ಮುಚ್ಚಲ್ಲ: 

ಹೊಸ ಬಸ್ ನಿಲ್ದಾಣ ನಿರ್ವಾಣಗೊಂಡ ಬಳಿಕ ಈಗಿರುವ ಸಬ್ ಅರ್ಬನ್ ಬಸ್ ನಿಲ್ದಾಣ ಮುಚ್ಚುವುದಿಲ್ಲ, ಬಸ್‌ಗಳ ಕಾರ್ಯಾಚರಣೆಯೂ ಸ್ಥಗಿತಗೊಳ್ಳುವುದಿಲ್ಲ. ಹೀಗಾಗಿ, ಜನರು ಅಲ್ಲಿಯ ಸುತ್ತಲಿನ ವ್ಯಾಪಾರಸ್ಥರು, ಹೋಟೆಲ್ ಉದ್ಯಮಿದಾರರು ಆತಂಕಗೊಳ್ಳುವ ಅಗತ್ಯವಿಲ್ಲ. ಇದು ಯಥಾಪ್ರಕಾರ ಕಾರ್ಯಾಚರಣೆ ನಡೆಸಲಿದೆ. ಆದರೆ, ಇದು ಕೆಲ ಊರುಗಳಿಗೆ ಸೀಮಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಮೈಸೂರಿನಿಂದ 80 ಕಿ.ಮೀ. ದೂರದಲ್ಲಿರುವ ಸುತ್ತಲಿನ ಊರಿನ ಬಸ್‌ಗಳು ಇಲ್ಲಿಂದಲೇ ಎಂದಿನಂತೆ ಸೇವೆ ಮುಂದುವರಿಸಲಿವೆ. ಜಿಲ್ಲೆಯ ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಮತ್ತು ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ನೆರೆಹೊರೆಯ ಜಿಲ್ಲೆಗಳಿಗೆ ಇಲ್ಲಿಂದ ಬಸ್‌ಗಳು ಓಡಾಡುತ್ತವೆ.


ಹಂತ ಹಂತವಾಗಿ ಸ್ಥಳಾಂತರ:

ಗ್ರಾವಾಂತರ ವಿಭಾಗದ ಅಂದಾಜು 800 ಬಸ್‌ಗಳು ನಿತ್ಯ 2,300ಕ್ಕೂ ಹೆಚ್ಚು ಟ್ರಿಪ್‌ಗಳಲ್ಲಿ  ಸಂಚರಿಸಲಿವೆ. 75 ಟ್ರಿಪ್ ಅಂತರ ರಾಜ್ಯಗಳ ನಗರಗಳಿಗೆ ಸಾರಿಗೆ ಬಸ್ ಸಂಚರಿಸಲಿವೆ. ಈ ಪೈಕಿ ಮೈಸೂರು-ಬೆಂಗಳೂರು ವಾರ್ಗದಲ್ಲಿ 114 ತಡೆರಹಿತ ಬಸ್‌ಗಳು ಸಂಚರಿಸುತ್ತಿವೆ. ನಿತ್ಯ ಅಂದಾಜು 20ರಿಂದ 25 ಸಾವಿರ ಜನರು ತಡೆರಹಿತ ಬಸ್‌ಗಳಲ್ಲಿ ಸಂಚಾರ ವಾಡುತ್ತಿದ್ದಾರೆ. ಜತೆಗೆ, ಸದ್ಯಕ್ಕೆ ಸಬ್ ಅರ್ಬನ್ ಬಸ್ ನಿಲ್ದಾಣಕ್ಕೆ ದಿನಕ್ಕೆ 2,600 ಬಸ್‌ಗಳು ಬಂದು ಹೋಗುತ್ತಿವೆ. 
ಮೊದಲ ಹಂತದಲ್ಲಿ 1,300 ಬಸ್‌ಗಳ ಕಾರ್ಯಾಚರಣೆ ಸ್ಥಳಾಂತರವಾಗಲಿದೆ. ಹಂತ ಹಂತವಾಗಿ ಉಳಿದ ಬಸ್‌ಗಳ ಕಾರ್ಯಾಚರಣೆಯನ್ನೂ ಹೊಸ ಬಸ್ ನಿಲ್ದಾಣಕ್ಕೆ ವರ್ಗಾವಣೆಯಾಗಲಿದೆ ಎಂದು ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.
ಹೊಸ ನಿಲ್ದಾಣದ ಒಳಭಾಗದಲ್ಲಿ ಜನರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಲು ಮೇಲ್ಭಾಗದಲ್ಲಿ ಮುಚ್ಚಳ ಹೊದಿಕೆ ವ್ಯವಸ್ಥೆ ವಾಡಲಾಗುತ್ತಿದೆ. ಜನರ ಅನುಕೂಲಕ್ಕಾಗಿ ಇಲ್ಲಿ ಉನ್ನತ ದರ್ಜೆಯ ಹವಾನಿಯಂತ್ರಿತ ವೇಟಿಂಗ್ 
ಹಾಲ್ ನಿರ್ಮಿಸಲಾಗುತ್ತಿದೆ. 
ಇದು ವಿವಾನ ನಿಲ್ದಾಣಗಳ ಲಾಂಜ್ ವಾದರಿಯಲ್ಲಿ ಇರಲಿದ್ದು, ಸುದೀರ್ಘ ಪ್ರಯಾಣ ವಾಡುವವರಿಗೆ ಆರಾಮದಾಯಕ ಅನುಭವ ನೀಡಲಿದೆ.  ಸಾವಾನ್ಯ ಕಾಯುವಿಕೆಗಾಗಿಯೂ ವಿಶಾಲವಾದ ಹಾಲ್, ಉಚಿತ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳ ವ್ಯವಸ್ಥೆ ಇರಲಿದೆ.

ಏನು ಸೌಲಭ್ಯ ಇರಲಿದೆ

* 10,538 ಚ.ಮೀ. ವ್ಯಾಪ್ತಿಯ ಬಸ್ ನಿಲ್ದಾಣದ ನೆಲವಾಳಿಗೆಯಲ್ಲಿ ಏಕಕಾಲಕ್ಕೆ 4,000 ಬೈಕ್, 200 ಕಾರ್‌ಗಳ ಪಾರ್ಕಿಂಗ್
* 18,370 ಚ.ಮೀ ವಿಸ್ತಾರದ ನೆಲಮಹಡಿಯಲ್ಲಿ ಬಸ್ ಟರ್ಮಿನಲ್, ಜನರಿಗೆ ಆಗಮನ ಮತ್ತು ನಿರ್ಗಮನ ದ್ವಾರಗಳು, ಟಿಕೆಟ್ ಬುಕ್ಕಿಂಗ್ ಕೌಂಟರ್, ಗಾರ್ಡನ್.
* 8,478 ಚ.ಮೀ.ವಿಸ್ತಾರದ 1ನೇ ಮಹಡಿಯು ವಿಶ್ರಾಂತಿ ಕೊಠಡಿಗಳು, ಡಾರ್ಮಿಟರಿ, ಕಚೇರಿಗೆ ಜಾಗ ಮೀಸಲು
* 75 ಬಸ್ ಅಂಕಣಗಳು ಲಭ್ಯ. 35 ಬಸ್‌ಗಳ ನಿಲುಗಡೆಗೆ ಸ್ಥಳಾವಕಾಶ, ವಿಶ್ರಾಂತಿ ಗಹ, ವಿಶಾಲವಾದ ಆಸನ ವ್ಯವಸ್ಥೆ
* ಶೌಚಗೃಹ, 4 ಲಿಫ್ಟ್‌ಗಳು, 2 ಎಲಿವೇಟರ್‌ಗಳು, ಗ್ರಂಥಾಲಯ, ಉಪಾಹಾರ ಗೃಹ, ವಿಚಾರಣಾ ಕೇಂದ್ರಗಳು
* ನಿಲ್ದಾಣದ ಸಂಪೂರ್ಣ ನಿರ್ವಹಣೆಗಾಗಿ ನಿಲ್ದಾಣಾಧಿಕಾರಿ ಕೊಠಡಿ, ಪ್ರತ್ಯೇಕ ಕಚೇರಿ ಸ್ಥಳ ನಿಗದಿ
* ಸಿಸಿ ಕ್ಯಾಮರಾಗಳು, ಪ್ರಚಾರ ವ್ಯವಸ್ಥೆ, ಪೊಲೀಸ್ ಚೌಕಿ, ಭದ್ರತಾ ಕಚೇರಿ, ತುರ್ತು ಆರೋಗ್ಯ ತಪಾಸಣಾ ಕೇಂದ್ರ, ಅಗ್ನಿ ಅವಡಗಳ ನಿರ್ವಹಣೆಗೆ ಪ್ರತ್ಯೇಕ ನಿಯಂತ್ರಣ ಕೊಠಡಿ, ತಾಯಿ-ಮಗು ಆರೈಕೆ ಕೇಂದ್ರ.

  ಸಮಸ್ಯೆಗಳ ಕೂಪವಾಗಿದೆ

ಕೇವಲ 4 ಎಕರೆ ಜಾಗದ ಸಬ್ ಅರ್ಬನ್ ನಿಲ್ದಾಣದಲ್ಲಿ ಸಮಸ್ಯೆಗಳ ಆಗರವಾಗಿ 
ದ್ದು, ಕಾರ್ಯನಿರ್ವಹಣೆೆ ಸವಾಲಿನ ಕೆಲಸವಾಗಿದೆ. ಇಲ್ಲಿಂದ 2,600 ಬಸ್‌ಗಳ ಸಂಚಾರ , ಪ್ರವೇಶ ದ್ವಾರದ ಬಳಿಯೇ ವಾಹನ ದಟ್ಟಣೆ, ನಿಲ್ದಾಣದ ಒಳಭಾಗದಲ್ಲಿ ಬಸ್ ನಿಲುಗಡೆಗೆ ಸ್ಥಳದ ಕೊರತೆ, ವಾರಾಂತ್ಯ, ಹಬ್ಬ ಹರಿದಿನಗಳಲ್ಲಿ ಜನರ ದಟ್ಟಣೆ ನಿರ್ವಹಣೆೆ ಕಷ್ಟಕರವಾಗಿದೆ. ಆದ್ದರಿಂದ ಮೈಸೂರಿಗೆ ಮತ್ತೊಂದು ಹೊಸ ಬಸ್ ನಿಲ್ದಾಣಬೇಕು ಎಂಬ ಬೇಡಿಕೆ ನನಸಾಗುವತ್ತ ಸಾಗಿದೆ.
"

ಸದ್ಯ ಇರುವ ಗ್ರಾವಾಂತರ ಬಸ್ ನಿಲ್ದಾಣವನ್ನು ಹಾಗೆಯೇ ಉಳಿಸಿಕೊಂಡು ಮೈಸೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಗೆ ಇಲ್ಲಿಂದ ಸೇವೆ ನೀಡಲಾಗುತ್ತದೆ. ದೂರದ ಊರುಗಳಿಗೆ ಹೊಸ ನಿಲ್ದಾಣದಿಂದ ಸೇವೆ ಕಲ್ಪಿಸಲಾಗುತ್ತದೆ. ಇದರಿಂದ ಸಬರ್ಬ್ ನಿಲ್ದಾಣದ ಮೇಲೆ ಅರ್ಧದಷ್ಟ್ಟು ಒತ್ತಡ ತಗ್ಗಲಿದೆ.

— ಶ್ರೀನಿವಾಸ್ ಕೆಎಸ್‌ಆರ್‌ಟಿಸಿ ಮೈಸೂರು ಗ್ರಾವಾಂತರ ವಿಭಾಗದ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net