ರೈತ ಕಾರಯ್ಯ ಎಂಬುವರಿಗೆ ಸೇರಿದ ಮೂರು ಎಕರೆ ರಾಗಿ, ಜೋಳ ಬೆಳೆದಿದ್ದ ಜಮೀನಿಗೆ ಇತ್ತೀಚೆಗೆ ನುಗ್ಗಿದ ಕಾಡಾನೆಗಳು ಬೆಳೆಯನ್ನು ಹಾಳು ಮಾಡಿವೆ. ಹಗಲು, ರಾತ್ರಿ ದುಡಿದು ಬೆಳೆದ ಬೆಳೆ ನಾಶವಾಗಿದೆ. ಅಲ್ಲದೆ ಇತರ ರೈತರ ಜಮೀನಿನಲ್ಲಿದ್ದ ಜೋಳ, ತೆಂಗು, ಮಾವಿನ ಗಿಡಗಳನ್ನು ನೆಲಸಮ ಮಾಡಿವೆ. ಅರಣ್ಯದಂಚಿನ ಗ್ರಾಮದ ರೈತರ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳ ಮೇಲೆ ಕಾಡು ಪ್ರಾಣಿಗಳು ದಾಳಿಯಿಟ್ಟು ಬೆಳೆಗಳನ್ನು ನಾಶ ಮಾಡುತ್ತಲೇ ಇವೆ.