ರಾಜಕಾರಣದಲ್ಲಿ ಯಾರು ಕೂಡ ಪ್ರಾಮಾಣಿಕರಿಲ್ಲ. ಈ ಕುರಿತು ಮನಸಾಕ್ಷಿಯನ್ನು ಕೇಳಿಕೊಳ್ಳಿ. ರಾಜಕಾರಣಿಗಳ ಪ್ರಾಮಾಣಿಕತೆಯ ಪ್ರಮಾಣವು ಶೇ.10, 40, 80, 90ರಷ್ಟು ಇರಬಹುದು. ಆದರೆ, ಯಾರೂ ಶುದ್ಧ ಹಸ್ತರಲ್ಲ. ನಾವೆಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ. ಎಲ್ಲರೂ ಸತ್ಯ ಒಪ್ಪಿಕೊಳ್ಳಬೇಕು. ಜೆಡಿಎಸ್‌ಗಿಂತ ಅತಿ ಹೆಚ್ಚು ಭ್ರಷ್ಟರು ಕಾಂಗ್ರೆಸ್‌ನಲ್ಲಿ ಇದ್ದಾರೆ. ರಾಜ್ಯದ ಜನರಿಗೂ ಎಲ್ಲ ಗೊತ್ತಿದೆ ಎಂದರು.