ಪಠ್ಯಕ್ರಮ ಪೂರ್ಣ ಗೊಳ್ಳದಿರುವುದು, ಸಂದೇಹ ನಿವಾರಣೆಗೆ ಅವಕಾಶ ಕಡಿಮೆಯಾಗುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ವಿದ್ಯಾರ್ಥಿಗಳಲ್ಲೂ ಅಸಮಾಧಾನ ತೀವ್ರವಾಗಿದೆ. ಒಟ್ಟಿನಲ್ಲಿ ವಿವಿ ಪ್ರತಿಷ್ಠೆಗೆ ಧಕ್ಕೆಯಾಗಿದೆ. ವಿವಿಧ ಶ್ರೇಯಾಂಕಗಳಲ್ಲಿ ವಿವಿ ಸ್ಥಾನ ಕುಸಿಯುತ್ತಿದೆ. ಆಡಳಿತಾತ್ಮಕ ಒತ್ತಡ ಅಧಿಕವಾಗಿದ್ದು, ಕಡಿಮೆ ಇರುವ ಬೋಧಕರ ಮೇಲೆಯೇ ಹೆಚ್ಚುವರಿ ಬೋಧನೆ, ಸಂಶೋಧನೆ, ಆಡಳಿತದ ಹೊಣೆಗಾರಿಕೆ ಬಿದ್ದಿದೆ.