ಮನಸ್ಸಿನ ಭಾಷೆ ಅರ್ಥಮಾಡಿಕೊಳ್ಳುವ ಹೃದಯಗಳು ಬೇಕು

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ.ಶ್ರೀಧರ, ಬಿ.ಆರ್.ಶಿವಕುಮಾರ್, ಉದ್ಯಮಿ ಕಡಕೊಳ ಕುಮಾರ್, ಕೃ.ಪ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಕೆ.ಆರ್.ರಮೇಶ್ ಕುಮಾರ್, ಪ್ರೊ.ಎನ್.ಎಂ.ತಳವಾರ, ನಾಗತಿಹಳ್ಳಿ ಚಂದ್ರಶೇಖರ್, ಕೆ.ಸಿ.ಶಿವಪ್ಪ, ಕೆ.ವಿ.ಮಲ್ಲೇಶ ಇದ್ದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ.ಶ್ರೀಧರ, ಬಿ.ಆರ್.ಶಿವಕುಮಾರ್, ಉದ್ಯಮಿ ಕಡಕೊಳ ಕುಮಾರ್, ಕೃ.ಪ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಕೆ.ಆರ್.ರಮೇಶ್ ಕುಮಾರ್, ಪ್ರೊ.ಎನ್.ಎಂ.ತಳವಾರ, ನಾಗತಿಹಳ್ಳಿ ಚಂದ್ರಶೇಖರ್, ಕೆ.ಸಿ.ಶಿವಪ್ಪ, ಕೆ.ವಿ.ಮಲ್ಲೇಶ ಇದ್ದರು.
Published on
ಮೈಸೂರು: ಮನಸ್ಸಿನ ಭಾಷೆ ಎಂದಿಗೂ ಮೂಕ. ಅದನ್ನು ಅರ್ಥಮಾಡಿಕೊಳ್ಳುವ ಹೃದಯಗಳು ಹೆಚ್ಚಬೇಕಿದೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಅನಿಕೇತನ ಸೇವಾ ಟ್ರಸ್ಟ್ ಮತ್ತು ವಿಸ್ಮಯ ಬುಕ್ ಹೌಸ್ ಗುರುವಾರ ಆಯೋಜಿಸಿದ್ದ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಹೊಳೆಯ ಮರಳು, ಹೊಂಗೆಯ ನೆರಳು, ಯಾಲಕ್ಕಿ ಗೊನೆ ಮತ್ತು ಅವರೆಯ ಸೊನೆ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿಟ್ಟಿಗೆ, ಕೋಪಕ್ಕೆ ಎಷ್ಟೋ ಜನರ ಬದುಕು, ಮನೆ ನರಕ ಆಗಿಬಿಟ್ಟಿದೆ ಎಂದರು.
ಮುಖ್ಯಮಂತ್ರಿ, ಪ್ರಧಾನಿ, ರಾಜ್ಯಪಾಲ, ಕುಲಪತಿ ಎಲ್ಲರೂ ಹಂಗಿನಲ್ಲೇ ಬದುಕುತ್ತಿದ್ದಾರೆ. ಹಂಗಿಗೆ ಒಳಗಾಗಬಾರದು ಎಂದು ನಿರ್ಭೀತಿಯಿಂದ ವರ್ತಿಸುತ್ತಿರುವವರಿಗೆ ನೆಮ್ಮದಿ ಇರುವುದಿಲ್ಲ ಎಂದರು.
ಭಾಷೆಯ ಗಾಂಭೀರ್ಯ, ಗೌರವ, ಜನರ ಹಕ್ಕುಗಳು ಕಳವಾಗುತ್ತಿವೆ. ಇಂಥ ಸಂದರ್ಭದಲ್ಲಿ ಇರಬೇಕಾದ ಸಾರ್ವಜನಿಕ ಸಿಟ್ಟು, ಲಜ್ಜೆ ಮಾಯವಾಗಿದೆ. ಎದುರಿಗಿರುವ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆಂಬುದು ಗೊತ್ತಿದ್ದರೂ ಸುಮ್ಮನೆ ಇದ್ದು, ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ. ರಾಜರು, ಚಕ್ರವರ್ತಿಗಳಿರುವಂತೆ ಈಗ ರಾಜಕಾರಣಿಗಳು ಇದ್ದಾರೆ. ಅವರಿಗೆ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ. ಹೊಗಳುಭಟರು ಹೆಚ್ಚಾಗಿದ್ದಾರೆ. ಸುಳ್ಳನ್ನು ಸತ್ಯವೆಂದು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಳ್ಳುವ ಕೃತಕ ಸಮಾಜ ನಿರ್ಮಾಣವಾಗಿದೆ ಎಂದರು.
ಕೃತಿಗಳ ಕುರಿತು ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಮಾತನಾಡಿ, ವ್ಯಂಗ್ಯ, ವಿಡಂಬನೆಯ ಮೂಲಕ ಸಮಕಾಲೀನ ಜಗತ್ತನ್ನು ಎಚ್ಚರಿಸುವ ಕೆಲಸವನ್ನು ಕೃತಿಗಳ ಮೂಲಕ ಲೇಖಕರು ಮಾಡಿದ್ದಾರೆ. ರಾಜ್‌ಕುಮಾರ್ ಅವರ ಬಗ್ಗೆ ಬರೆದ ಅವರು, ತಮ್ಮ ಊರಿನಲ್ಲಿ ಅನಾಥರಾಗಿ ಬದುಕಿದ ದಾಸಯ್ಯನ ಬಗ್ಗೆಯೂ ಬರೆದಿದ್ದಾರೆ ಎಂದು ಉದಾಹರಿಸಿದರು.
ಲೇಖಕರ ಬರವಣಿಗೆ ಸತ್ವಪೂರ್ಣವಾಗಿದ್ದು, ಗ್ರಾಮೀಣ ಮನೋಧರ್ಮ, ಸೊಗಡು ಬಿಂಬಿತವಾಗಿದೆ. 171 ಅಂಕಣ ಬರಹಗಳು ನಾಲ್ಕು ಪುಸ್ತಕಗಳಾಗಿವೆ. ತುಂಬಿ ತುಳುಕುವ ಗ್ರಾಮೀಣ ಅನುಭವ, ಕನ್ನಡ ಪ್ರೇಮ, ಮಾಹಿತಿ ಪೂರ್ಣ ಅಂಶಗಳು, ಸೃಜನಶೀಲತೆ ಇದ್ದು, ಬೆಲ್ಲದ ಅಚ್ಚಾಗಿದ್ದೂ, ಯಾವ ಮೂಲೆಯಿಂದಾದರೂ ಸಿಹಿ ಸವಿಯಬಹುದು ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ, ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ.ಶ್ರೀಧರ, ಬಿ.ಆರ್.ಶಿವಕುಮಾರ್, ಉದ್ಯಮಿ ಕಡಕೊಳ ಕುಮಾರ್, ಕೃ.ಪ.ಗಣೇಶ್, ಪ್ರಕಾಶ್ ಚಿಕ್ಕಪಾಳ್ಯ ಅವರನ್ನು ಸನ್ಮಾನಿಸಲಾಯಿತು.
ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಕೆ.ಸಿ.ಶಿವಪ್ಪ, ನಗರ ಪಾಲಿಕೆ ಮಾಜಿ ಸದಸ್ಯರು ಆದ ಕಾಂಗ್ರೆಸ್ ಮುಖಂಡ ಕೆ.ವಿ.ಮಲ್ಲೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net