ವಿಶ್ವೇಶ್ವರಯ್ಯ ನಾಲೆ ಆಧುನೀಕರಣದಿಂದ 1800 ಎಕರೆಗೆ ನೀರು ಪೂರೈಕೆ

 ತಿ.ನರಸಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರಗನೂರು ಶಾಖಾ ನಾಲೆ ವಿಸ್ತರಣೆ, ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ನೆರವೇರಿಸಿದರು. ಲಕ್ಷ್ಮೀಕಾಂತ ರೆಡ್ಡಿ,  ಯುಕೇಶ್ ಕುಮಾರ್,  ಮಲ್ಲಿಕಾರ್ಜುನ ಬಾಲದಂಡಿ,  ಸುನೀತಾ ವೀರಪ್ಪಗೌಡ ತರರು ಇದ್ದರು.
ತಿ.ನರಸಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರಗನೂರು ಶಾಖಾ ನಾಲೆ ವಿಸ್ತರಣೆ, ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭೂಮಿಪೂಜೆ ನೆರವೇರಿಸಿದರು. ಲಕ್ಷ್ಮೀಕಾಂತ ರೆಡ್ಡಿ, ಯುಕೇಶ್ ಕುಮಾರ್, ಮಲ್ಲಿಕಾರ್ಜುನ ಬಾಲದಂಡಿ, ಸುನೀತಾ ವೀರಪ್ಪಗೌಡ ತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ
  • ಚಿದರವಳ್ಳಿಯಲ್ಲಿ 91.33 ಕೋಟಿ ರೂ. ವೆಚ್ಚದ ತುರಗನೂರು ಶಾಖಾ ನಾಲೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಮೈಸೂರು: ತುರಗನೂರು ಶಾಖಾ ನಾಲೆಯು ವಿಶ್ವೇಶ್ವರಯ್ಯ ನಾಲೆಯ ಅಂತಿಮ ನೆಲೆಯಾಗಿದ್ದು, ಈ ನಾಲೆಯನ್ನು 1943ರಲ್ಲಿ ನಿರ್ಮಿಸಲಾಗಿದೆ. ಇದರ ಆಧುನೀಕರಣದಿಂದ ಸುಮಾರು 1800 ಎಕರೆಗೆ ಕೃಷಿ ಭೂಮಿಗೆ ನೀರು ಸಿಗಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಚಿದರವಳ್ಳಿಯಲ್ಲಿ 91.33 ಕೋಟಿ ರೂ. ವೆಚ್ಚದ ತಿ.ನರಸಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರಗನೂರು ಶಾಖಾ ನಾಲೆ ವಿಸ್ತರಣೆ, ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತುರಗನೂರು ನಾಲೆ ಅಭಿವೃದ್ಧಿಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. 70 ವರ್ಷಗಳ ನಂತರ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿ ಕಾಮಗಾರಿ ರೂಪಿಸಿ ಅನುದಾನ ನೀಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು. 
 ನಂಜಾಪುರ ಏತ ನೀರಾವರಿ ಯೋಜನೆಯ ಪ್ರಾರಂಭವಾದ ದಿನದಿಂದಲೂ ಇದ್ದ ತೊಡಕನ್ನು ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಲು ಹಾಗೂ ಎಲ್ಲ ಮೋಟಾರ್‌ಗಳನ್ನು ಹೊಸದಾಗಿ ಅಳವಡಿಸಿ ದುರಸ್ತಿಪಡಿಸಲು ಸುಮಾರು 20 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದರು. 
ತುರಗನೂರು ಅಭಿವೃದ್ಧಿ ಕಾಮಗಾರಿಯಿಂದ ಸುಮಾರು 100 ಕ್ಯೂಸೆಕ್‌ಗಿಂತ ಅಧಿಕ ಪ್ರಮಾಣದ ನೀರು ಸೋಸಲೆ ಹೋಬಳಿಯ ಗ್ರಾಮಗಳಿಗೆ ಲಭಿಸುವುದರಿಂದ ಈ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುವ ದಿನಗಳು ದೂರವಿಲ್ಲ ಎಂದು ತಿಳಿಸಿದರು. 
ನಂಜಾಪುರ, ಸಿ.ವಿ.ಕೊಪ್ಪಲು, ಹೊಸಕೊಪ್ಪಲು, ಚಿಮಿಲಿ, ಚಿಕ್ಕಕಲ್ಲುಣಿ, ಬೊಮ್ಮನಹಳ್ಳಿ, ಎಸ್.ದೊಡ್ಡಪುರ, ಕೆಂಪನಪುರ, ಸೀಗೋಡಿಪುರ, ಬೋಳೇಗೌಡನಹುಂಡಿ, ರಾಮೇಗೌಡನಪುರ, ವಡ್ಡರಕೊಪ್ಪಲು, ಮರಿಯೂರು, ಬಿ.ಬೆಟ್ಟಹಳ್ಳಿ, ಮೇಗಲಕೊಪ್ಪಲು, ಕುಂತನಹಳ್ಳಿ, ದೇವಿನಹಳ್ಳಿ, ಎಂ.ಎಲ್.ಹುಂಡಿ, ಕಳ್ಳಪುರ, ಬೂದಹಳ್ಳಿ, ಉತ್ಸಲಗೆರೆ, ಕನ್ನಾಯಕನಹಳ್ಳಿ, ತಮ್ಮಡಿಪುರ, ನಾಗಲಿಗೆರೆ, ಕೋಣಗಹಳ್ಳಿ, ಚಿಟ್ಟಗಯ್ಯನಕೊಪ್ಪಲು, ನೆರೆಗ್ಯಾತನಹಳ್ಳಿ, ಹೊರಳಹಳ್ಳಿ, ಚಿದರವಳ್ಳಿ, ಮುಡುಕನಪುರ. ಹಲವಾರ, ದೊಡ್ಡೇಬಾಗಿಲು, ಕೊಳತ್ತೂರು ಗ್ರಾಮಗಳಿಗೆ ಈ ಕಾಮಗಾರಿಯಿಂದ ಉಪಯುಕ್ತವಾಗಲಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ಬಡವರ ಜೀವನ ಮಟ್ಟ ಸುಧಾರಿಸಿದೆ. ಬಡ ಮಹಿಳೆ ಹಾಗೂ ಕುಟುಂಬಕ್ಕೆ ಒಟ್ಟಾರೆ 4 ರಿಂದ 5 ಸಾವಿರ ರೂ. ದೊರೆಯುತ್ತಿದೆ ಎಂದು ಹೇಳಿದರು. 
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಮಾಜಿ ಸದಸ್ಯೆ ಸುನೀತಾ ವೀರಪ್ಪಗೌಡ, ಮುಖಂಡರಾದ ಎಚ್.ಸಿ.ಸಿದ್ಧಾರ್ಥ, ಸೋಸಲೆ ಮಹದೇವಸ್ವಾಮಿ, ವರದನಾಯಕ್, ಚಲುವರಾಜು, ಮಲ್ಲಿಕಾರ್ಜುನ, ಪರಶಿವಮೂರ್ತಿ ಇತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net