ಮೈಸೂರಿನಲ್ಲಿ ತ್ಯಾಜ್ಯಮುಕ್ತ ತಾಣಗಳ ಅಭಿಯಾನಕ್ಕೆ ಚಾಲನೆ

 ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಅಧಿಕಾರಿಗಳಾದ ಸಿಂಧೂ, ಮುಖ್ಯ ಲೆಕ್ಕಾಧಿಕಾರಿ ಶ್ವೇತಾ, ಕಾರ್ಯಪಾಲಕ ಅಭಿಯಂತರರಾದ ಮಧುಸೂಧನ್.
ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಅಧಿಕಾರಿಗಳಾದ ಸಿಂಧೂ, ಮುಖ್ಯ ಲೆಕ್ಕಾಧಿಕಾರಿ ಶ್ವೇತಾ, ಕಾರ್ಯಪಾಲಕ ಅಭಿಯಂತರರಾದ ಮಧುಸೂಧನ್.
Published on

ಪ್ರಮುಖ ಮುಖ್ಯಾಂಶಗಳು

  • * 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆಯಿಂದ ಆಯೋಜನೆ
ಮೈಸೂರು; 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೈಗೊಂಡಿರುವ ‘80 ತ್ಯಾಜ್ಯಮುಕ್ತ ತಾಣಗಳು’ ಅಭಿಯಾನಕ್ಕೆ  ಚಾಲನೆ ದೊರೆಯಿತು
‘ಸ್ವಚ್ಛ ಮೈಸೂರು-ನಮ್ಮೆಲ್ಲರ ಸಂಕಲ್ಪ’ ಎಂಬ ಧ್ಯೇಯವಾಕ್ಯದೊಂದಿಗೆ ನಗರವನ್ನು ತ್ಯಾಜ್ಯಮುಕ್ತವಾಗಿಸುವ ಉದ್ದೇಶದಿಂದ ಈ ಅಭಿಯನವನ್ನು ನಗರದ 80 ಸ್ಥಳಗಳಲ್ಲಿ ಹಂತ ಹಂತವಾಗಿ ನಡೆಸಲಾಗುತ್ತಿದೆ.
ಮೊದಲ ಹಂತವಾಗಿ ಬೆಳಗ್ಗೆ ಚಾಮರಾಜ ಜೋಡಿ ರಸ್ತೆಯ  ಸ್ವಾತಂತ್ರ್ಯ ಉದ್ಯಾನ  ಸಮೀಪದಲ್ಲಿರುವ ತ್ಯಾಜ್ಯ ಬೀಳುವ ತಾಣವನ್ನು ಸ್ವಚ್ಛಗೊಳಿಸಿ ತ್ಯಾಜ್ಯಮುಕ್ತ ತಾಣವನ್ನಾಗಿ ಪರಿವರ್ತಿಸಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ, ಕ್ಲೀನ್ ಮೈಸೂರು ಗ್ರೂಪ್, ಸ್ೇ ವೀಲ್ಸ್, ಟ್ರಾವೆಲ್ಸ್ ಅಸೋಸಿಯೇಷನ್, ದತ್ತಗಲ್ಲಿ ಕ್ಲೀನ್ ಫೌಂಡೇಷನ್, ಜಿ.ಎಸ್.ಎಸ್. ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಈ ಕೆಲಸಕ್ಕೆ ಕೈಜೋಡಿಸಿದರು.
ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಅಪರ ಜಿಲ್ಲಾಧಿಕಾರಿ ವೀಣಾ, ಅಧೀಕ್ಷಕ ಅಭಿಯಂತರರಾದ ಸಿಂಧೂ, ಮುಖ್ಯ ಲೆಕ್ಕಾಧಿಕಾರಿ ಶ್ವೇತಾ, ಕಾರ್ಯಪಾಲಕ ಅಭಿಯಂತರರಾದ ಮಧುಸೂಧನ್, ಶ್ರೀನಿವಾಸ್ ಹಾಗೂ ಮೋಹನ್, ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಎಸ್.ಮೃತ್ಯುಂಜಂು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net