ಕ್ರೀಡೆಗಿದೆ ಶಿಸ್ತು, ಏಕಾಗ್ರತೆ ಬೆಳೆಸುವ ಶಕ್ತಿ

ಪಿರಿಯಾಪಟ್ಟಣ ತಾಲೂಕಿನ ಆಲದಕಟ್ಟೆ ಗಿರಿಜನ ಹಾಡಿಯಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ನಿತಿನ್ ವೆಂಕಟೇಶ್ ಬಹುಮಾನ ವಿತರಿಸಿದರು. ರವಿಚಂದ್ರ, ಸಂತೋಷ್, ಎಚ್.ಆರ್.ಗೋಪಾಲ್, ರಘು ಇತರರು ಇದ್ದರು.
ಪಿರಿಯಾಪಟ್ಟಣ ತಾಲೂಕಿನ ಆಲದಕಟ್ಟೆ ಗಿರಿಜನ ಹಾಡಿಯಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ನಿತಿನ್ ವೆಂಕಟೇಶ್ ಬಹುಮಾನ ವಿತರಿಸಿದರು. ರವಿಚಂದ್ರ, ಸಂತೋಷ್, ಎಚ್.ಆರ್.ಗೋಪಾಲ್, ರಘು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಅಭಿಮತ
ಪಿರಿಯಾಪಟ್ಟಣ : ಕ್ರೀಡೆ ಎನ್ನುವುದು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಶಿಸ್ತು, ಏಕಾಗ್ರತೆ ಬೆಳೆಸುವ ಶಕ್ತಿಯಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ತಾಲೂಕಿನ ಬೂದಿತಿಟ್ಟು ಗ್ರಾಮದ ಆಲದಕಟ್ಟೆ ಗಿರಿಜನ ಹಾಡಿಯಲ್ಲಿ ಸೋಮವಾರ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಸಹಕರಿಸಲಾಗುತ್ತಿದೆ, ಇದೇ ಮೊದಲ ಬಾರಿಗೆ ಗಿರಿಜನ ಹಾಡಿಯಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಸಂತೋಷದ ವಿಷಯವಾಗಿದ್ದು, ಇಂತಹ ಗ್ರಾಮೀಣ ಹಾಗೂ ಸ್ಥಳೀಯ ಕ್ರೀಡೆಗಳು ಯುವಜನತೆಯಲ್ಲಿ ಹೊಸ ಚೈತನ್ಯವನ್ನು ತುಂಬುತ್ತವೆ ಎಂದು ಹೇಳಿದರು.
ಗ್ರಾಮಾಂತರ ಪ್ರದೇಶದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಎಲ್ಲ ರೀತಿಯ ಕ್ರೀಡೆಗಳಿಗೆ ಬೆಂಬಲ ನೀಡಲಾಗುತ್ತಿದೆ. ಇದು ಯಾವುದೇ ಚುನಾವಣಾ ಗಿಮಿಕ್ ಅಲ್ಲ, ಉತ್ತಮ ಕ್ರೀಡಾಪಟುಗಳನ್ನು ಬೆಳೆಸುವ ನಿಟ್ಟಿನಲ್ಲಿನ ಸತತ ಪ್ರಯತ್ನವಾಗಿದೆ. ಚುನಾವಣೆಗಳು ಬಂದಾಗ ನಮ್ಮ ತಂದೆ ಕೆ.ವೆಂಕಟೇಶ್ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಆರ್.ಗೋಪಾಲ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಗ್ರಾಮೀಣ ಕ್ರೀಡೆಗಳು ಹೆಚ್ಚು ಹೆಚ್ಚು ನಡೆದರೆ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಿದಂತಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಚಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ನಂದಿ ಬೋರ್‌ವೆಲ್‌ನ ಮಾಲೀಕ ಸಂತೋಷ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಾರದಾ, ಶ್ರುತಿ, ಸಿ.ಕೆ.ಶ್ರುತಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಘು, ತಾಲೂಕು ಬುಡಕಟ್ಟು ಜನಾಂಗದ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದು, ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸರಸ್ವತಿ ನಿಂಗೇಗೌಡ, ಯಜಮಾನರಾದ ರಾಜು, ವಿನಾಯಕ ಬಳಗದ ಅಧ್ಯಕ್ಷ ಸುನಿಲ್ ಹಾಗೂ ಮುಖಂಡರಾದ ಕುಮಾರ್, ಕಾಂತರಾಜು, ಗಣೇಶ್, ಪ್ರಕಾಶ್, ತೀರ್ಪುಗಾರರಾದ ಭಾಸ್ಕರ್,ಎಂ.ನಾಗಯ್ಯ, ಪುನೀತ್ ಕುಮಾರ್, ಎಂ.ಎ. ಸ್ವಾಮಿ ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net