ಯುವಜನರಿಗೆ ವೀರ ಸಾವರ್ಕರ್ ಆದರ್ಶ ಆಗಬೇಕು

 ಕುವೆಂಪುನಗರದ ವಾಸವಿ ವಿದ್ಯಾನಿಕೇತನದಲ್ಲಿ ಗುರುವಾರ ಆಯೋಜಿಸಿದ್ದ ವಿನಾಯಕ ದಾಮೋದರ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಯುವ ಪ್ರತಿಷ್ಠಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಡಾ.ಕೆ. ರಘುರಾಂ ವಾಜಪೇಯಿ,  ಡಾ.ಕೆ. ಲೀಲಾಪ್ರಕಾಶ್, ಎನ್. ಅನಂತ, ಎಂ.ವಿ. ನಾಗೇಂದ್ರ ಬಾಬು, ಎ. ಹರ್ಷವರ್ಧನ ಇದ್ದರು.

Published on
ಮೈಸೂರು: ಯುವಜನರಿಗೆ ವೀರ ಸಾವರ್ಕರ್ ಆದರ್ಶ ಆಗಬೇಕು ಎಂದು ಸಮಾಜ ಸೇವಕ ಡಾ.ಕೆ. ರಘುರಾಂ ವಾಜಪೇಯಿ ಹೇಳಿದರು.
ಯುವ ಪ್ರತಿಷ್ಠಾನ ವತಿಯಿಂದ ಕುವೆಂಪುನಗರದ ವಾಸವಿ ವಿದ್ಯಾನಿಕೇತನದಲ್ಲಿ ಗುರುವಾರ ಆಯೋಜಿಸಿದ್ದ ವಿನಾಯಕ ದಾಮೋದರ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾವರ್ಕರ್ ಯಾರಿಗೂ ಹೆದರದೆ ದೇಶದ ಸ್ವಾತಂತ್ರೃಕ್ಕೆ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬ್ರಿಟಿಷರ ವಿರುದ್ಧ ಅವರು ಕಠಿಣವಾದ ಹೋರಾಟ ನಡೆಸಿದ್ದರು. ಇದಕೋಸ್ಕರ ಅವರು ಅಂಡಮಾನ್ ಜೈಲಿನಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದರು ಎಂದು ಸ್ಮರಿಸಿದರು.
ವೀರ ಸಾವರ್ಕರ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಾವರ್ಕರ್ ಅವರ ಜೀವನವನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಈ ಕುರಿತು ಯುವಜನರು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿದುಷಿ ಡಾ.ಕೆ. ಲೀಲಾಪ್ರಕಾಶ್, ಹಿಮಾಲಯ ಪ್ರತಿಷ್ಠಾನ ಅಧ್ಯಕ್ಷ ಎನ್. ಅನಂತ, ವಾಸುದೇವ ಮಹಾರಾಜ್ ಪ್ರತಿಷ್ಠಾನದ ಅಧ್ಯಕ್ಷ ಎಂ.ವಿ. ನಾಗೇಂದ್ರ ಬಾಬು, ಯುವ ಪ್ರತಿಷ್ಠಾನದ ಅಧ್ಯಕ್ಷ ಎ. ಹರ್ಷವರ್ಧನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net