ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭ ಕಾಸರಗೋಡು, ಹೊಸೂರು, ತಾಳವಾಡಿ ಸೇರಿದಂತೆ ಸಾಕಷ್ಟು ಕನ್ನಡದ ಪ್ರದೇಶಗಳು ನೆರೆಯ ರಾಜ್ಯಗಳಿಗೆ ಸೇರ್ಪಡೆಯಾಗಿದ್ದು, ಅಲ್ಲಿನ ಕನ್ನಡಿಗರ ಹಿತ ಕಾಯಬೇಕಾಗಿರುವುದು ನಮ್ಮ ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಹಾಗಾಗಿ ಈ ಬಾರಿಯ ಬಜೆಟ್‌ನಲ್ಲಿ ಹೊರನಾಡ ಕನ್ನಡಿಗರ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲಿಡಬೇಕು. ಹೊರ ರಾಜ್ಯದ ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.