ಕರ್ನಾಟಕ ಬಂದ್ ಬೆಂಬಲಿಸಿ ಮೈಸೂರಿನಲ್ಲಿ ವಾಟಾಳ್ ನಾಗರಾಜ್‌ರಿಂದ ಕುಂಬಳಕಾಯಿ ಚಳವಳಿ

ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಶನಿವಾರ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕುಂಬಳಕಾಯಿ ಚಳವಳಿ ನಡೆಯಿತು.
ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಶನಿವಾರ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕುಂಬಳಕಾಯಿ ಚಳವಳಿ ನಡೆಯಿತು.
Published on

ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿ ಆ.13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಬೆಂಬಲಿಸಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಶನಿವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ದಿಂದ ಕುಂಬಳಕಾಯಿ ಚಳವಳಿ ನಡೆಸಲಾಯಿತು.

ಯಾವುದೇ ಕಾರಣಕ್ಕೂ ರಾಜ್ಯದ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಬಾರದು. ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಆ.13 ರಂದು ಬಂದ್‌ಗೆ ಕರೆ ನೀಡಲಾಗಿದೆ. ಈಗಾಗಲೇ ರಾಜ್ಯದ 2 ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ನಡೆಸುವುದು ನಿಶ್ಚಿತ ಎಂದು ವಾಟಾಳ್ ನಾಗರಾಜ್ ಹೇಳಿದರು.
ಬಂದ್‌ಗೆ ಎಲ್ಲ ಸಂಘ ಸಂಸ್ಥೆಗಳು ಬೆಂಬಲ ನೀಡಬೇಕು. ಹೋಟೆಲ್ ಮಾಲೀಕರ ಸಂಘದವರು ಬಂದ್‌ಗೆ ಸಹಕಾರ ನೀಡಬೇಕು. ಒಂದು ದಿನ ವ್ಯಾಪಾರ ನಡೆಸದೆ ಹೋದರೆ ಏನೂ ಆಗುವುದಿಲ್ಲ. ಬಂದ್ ನಡೆಸುವ ಮೂಲಕ ನಾವು ಒಗ್ಗಟ್ಟು ಪ್ರದರ್ಶಿಸಬೇಕು. ಆ.10 ರಂದು ತಮಿಳುನಾಡು ಗಡಿ ಬಂದ್ ನಡೆಸಲಾಗುವುದು. ತಮಿಳುನಾಡಿನಿಂದ ರಾಜ್ಯಕ್ಕೆ ಯಾವುದೇ ವಾಹನ ಬರಲು ಅವಕಾಶ ನೀಡುವುದಿಲ್ಲ, ಅದೇ ರೀತಿ ರಾಜ್ಯದಿಂದ ತಮಿಳುನಾಡಿಗೆ ವಾಹನ ತೆರಳಲು ಬಿಡುವುದಿಲ್ಲ ಎಂದರು.
ಮಹಾದಾಯಿ, ಕಳಸಾಬಂಡೂರಿ, ಮೇಕೆದಾಟು ಯೋಜನೆ ಜಾರಿಯಾಗಲೇ ಬೇಕು. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯವಾಗಿ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಏನೇ ವಿರೋಧ ಬಂದರೂ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಪಾರ್ಥಸಾರಥಿ , ತೇಜೇಶ್ ಲೋಕೇಶ್ ಗೌಡ, ನಾರಾಯಣ ಸ್ವಾಮಿ, ಗೋಪಿನಾಥ್, ಸಿಂದುವಳ್ಳಿ ಶಿವಕುಮಾರ್, ಹನುಮಂತಯ್ಯ, ಶಿವರಾಮ್, ಮಹಾದೇವ, ಜಿಯಾ, ಕ್ರಾಂತಿ ಕುಮಾರ್, ರಾಧಾಕೃಷ್ಣ , ರವೀಶ್ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net