ವಾಸುದೇವಾಚಾರ್ಯ ಕರ್ನಾಟಕ ಸಂಗೀತ ಶ್ರೇಷ್ಠ ವಾಗ್ಗೇಯಕಾರ: ಸಂಸದ ಯದುವೀರ್

ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಆಯೋಜಿಸಿದ್ದ ಮೈಸೂರು ವಾಸುದೇವಾಚಾರ್ಯ ಅವರ ಜನ್ಮದಿನೋತ್ಸವವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಟಿ.ಎಸ್.ಶ್ರೀವತ್ಸ, ಸುದರ್ಶನ್, ಟಿ.ಎಸ್.ಸತ್ಯವತಿ,  ಲಕ್ಷ್ಮೀನಾರಾಯಣ ಬಾಬು ಇದ್ದರು.
ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಆಯೋಜಿಸಿದ್ದ ಮೈಸೂರು ವಾಸುದೇವಾಚಾರ್ಯ ಅವರ ಜನ್ಮದಿನೋತ್ಸವವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಟಿ.ಎಸ್.ಶ್ರೀವತ್ಸ, ಸುದರ್ಶನ್, ಟಿ.ಎಸ್.ಸತ್ಯವತಿ, ಲಕ್ಷ್ಮೀನಾರಾಯಣ ಬಾಬು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಾಸುದೇವಾಚಾರ್ಯ ಅವರ 192ನೇ ಜನ್ಮದಿನೋತ್ಸ
ಮೈಸೂರು: ಮಹಾನ್ ವಾಗ್ಗೇಯಕಾರ, ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯ ಅವರ 192ನೇ ಜನ್ಮದಿನೋತ್ಸವವನ್ನು ಗುರುವಾರ ಆಚರಿಸಲಾಯಿತು.
ನಗರದ ನಾರಾಯಣಶಾಸಿ ರಸ್ತೆಯ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಸಂಗೀತಾಸಕ್ತರು, ಕಲಾವಿದರು ಹಾಗೂ ಗಣ್ಯರು ಭಾಗವಹಿಸಿ  ವಾಸುದೇವಾಚಾರ್ಯರ ಸಾಧನೆಯನ್ನು ಮೆಲುಕು ಹಾಕಿದರು
ಕಾರ್ಯಕ್ರಮವನ್ನು ಉದ್ಘಾಟಿಸಿ ವಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತ ಕ್ಷೇತ್ರದ ಶ್ರೇಷ್ಠ ವಾಗ್ಗೇಯಕಾರರಲ್ಲಿ ಒಬ್ಬರು. ಅವರ ಕೃತಿಗಳು ಇಂದಿಗೂ ದೇಶ-ವಿದೇಶಗಳ ಸಂಗೀತ ವೇದಿಕೆಗಳಲ್ಲಿ ಗಾಯನಗೊಳ್ಳುತ್ತಿವೆ. ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದ ಅವರು, ಭಕ್ತಿ, ಸಾಹಿತ್ಯ ಮತ್ತು ಸಂಗೀತವನ್ನು ಸಮನ್ವಯಗೊಳಿಸಿ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಮೈಸೂರು ಅರಮನೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ವಾಸುದೇವಾಚಾರ್ಯರು, ಸಂಸ್ಥಾನದ ಸಂಗೀತ ಪರಂಪರೆಯನ್ನು  ರಾಷ್ಟ್ರಮಟ್ಟದಲ್ಲಿ ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೈಸೂರಿನ ಅನೇಕ ಸಂಗೀತ ವಿದ್ವಾಂಸರು ಅವರ ವಾರ್ಗದರ್ಶನ ಮತ್ತು ಕೃತಿಗಳಿಂದ ಪ್ರೇರಣೆ ಪಡೆದಿದ್ದಾರೆ. ಅವರ ಸಂಗೀತ ಪರಂಪರೆ ಇಂದಿಗೂ ಮುಂದುವರಿಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಮೈಸೂರು ಸಂಸ್ಥಾನದ ಸಂಗೀತ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಮೈಸೂರು ವಾಸುದೇವಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದರು.
ಮೈಸೂರಿನ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರವು ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಪಾರಂಪರಿಕ ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಯ ಜೀವಂತ ತಾಣವಾಗಿದೆ ಎಂದು ಹೇಳಿದರು.
ದಸರಾ ಮಹೋತ್ಸವದ ವೇಳೆ ವಾತ್ರವಲ್ಲದೆ, ವರ್ಷಪೂರ್ತಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಈ ಮಂದಿರವು ಮೈಸೂರು ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಕರ್ನಾಟಕ ಶಾಸೀಂು ಸಂಗೀತದ ಹಿರಿಯ ಕಲಾವಿದೆ ಟಿ.ಎಸ್.ಸತ್ಯವತಿ, ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದ ಕಾಯರ್ರ್ದರ್ಶಿ ಲಕ್ಷ್ಮೀ ನಾರಾಯಣಬಾಬು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net