ಶಿಕ್ಷಣದಲ್ಲಿ ಮೌಲ್ಯಗಳು ಪ್ರಭಾವಿತ

ಶಿಕ್ಷಣ
ಶಿಕ್ಷಣ
Published on
ಪ್ರತಿಯೊಬ್ಬರ ಜೀವನದಲ್ಲೂ ಮೌಲ್ಯಗಳು ಮುಖ್ಯ. ಅದಕ್ಕೂ ಮಿಗಿಲಾಗಿ ಶಿಕ್ಷಣದಲ್ಲಿನ ಮೌಲ್ಯ ಪ್ರಭಾವಿತವಾದದ್ದು ಎಂದು ಮೈಸೂರು ವಿಶ್ವವಿದ್ಯಾಲಯ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಡೇನಿಯಲ್ ತಿಳಿಸಿದರು.
ಮಾನಸ ಗಂಗೋತ್ರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಶುಕ್ರವಾರ ಉನ್ನತ ಶಿಕ್ಷಣದಲ್ಲಿನ ಮೌಲ್ಯಗಳು ವಿಷಯ ಕುರಿತು ಉಪನ್ಯಾಸ ಮಾಡಿ, ಮೌಲ್ಯಗಳು ತಪ್ಪು ಸರಿಗಳ ನಡುವಿನ ವ್ಯತ್ಯಾಸಗಳನ್ನು ವಿಮರ್ಶಿಸುವ ಗುಣ ಬೆಳೆಸುತ್ತದೆ. ಮೌಲ್ಯ ಎಂಬುದು ಬದುಕಿನ ಕ್ರಮ ಮತ್ತು ನಡವಳಿಕೆ ಪ್ರತಿರೂಪ ಎಂದರು.
ಯಾರಲ್ಲಿ ಮೌಲ್ಯಗಳಿರಲು ಸಾಧ್ಯವಿಲ್ಲವೋ ಅವರಲ್ಲಿ ಮಾನವೀಯ ಮೌಲ್ಯಗಳು ಕಾಣಿಸುವುದಿಲ್ಲ. ಮಾನವೀಯ ಮೌಲ್ಯಗಳಿಲ್ಲದಿದ್ದಲ್ಲಿ ವಿಚಾರವಂತಿಕೆ, ನೈತಿಕೆತೆ ಹುಟ್ಟಲು ಸಾಧ್ಯವಿಲ್ಲ ಎಂದರು.
ನಾವು ಹೇಗೆ ಜೀವಿಸುತ್ತಿವೋ, ವರ್ತಿಸುತ್ತಿವೋ, ನಡೆದುಕೊಳ್ಳುತ್ತಿವೋ ಅದರ ಮೇಲೆ ಮೌಲ್ಯಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಣವು ವಿದ್ಯಾರ್ಥಿಗಳನ್ನು ಪ್ರೇರಿಪಿಸಿ ಒತ್ತು ನೀಡಬೇಕು. ಇದರಿಂದ ಮಾತ್ರ ಒಂದು ಉತ್ತಮ ಸಮಾಜ, ಸದೃಢ ದೇಶ ನಿರ್ಮಾಣ ಸಾದ್ಯ ಎಂದು ತಿಳಿಸಿದರು.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್ ಹರಿನಾರಾಯಣ, ಸಂಯೋಜಕ ಡಾ.ಎಂ.ಸುನೀಲ್ ಕುಮಾರ್, ಮುಲಿಸಾ ಕಾರ್ಯದರ್ಶಿ ಆರ್.ರಾಕೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net