ಸಮಾನತೆ ಸಂದೇಶ ಸಾರಿದ ವಚನ ಸಾಹಿತ್ಯ

ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವಾರ್ಷಿಕೋತ್ಸವ, ಬಸವ ಜಯಂತಿ ಕಾರ್ಯಕ್ರಮ
ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವಾರ್ಷಿಕೋತ್ಸವ, ಬಸವ ಜಯಂತಿ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವಾರ್ಷಿಕೋತ್ಸವ
  • ವಚನ ಸಾಹಿತ್ಯದಲ್ಲಿ ಪ್ರಪಂಚದ ಅರಿವಿದೆ
ಮೈಸೂರು: ಜೀವನ ಸಂದೇಶ ಇರುವ ಅರ್ಥಪೂರ್ಣ ವಚನ ಸಾಹಿತ್ಯವನ್ನು ಯುವಜನರು ಅರ್ಥೈಸಿಕೊಳ್ಳಬೇಕು ಎಂದು ಕೈಗಾರಿಕೋದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವಾರ್ಷಿಕೋತ್ಸವ, ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣ ಮತ್ತು ಇತರ ಶರಣರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹಾಗೂ ಜನಸಾಮಾನ್ಯರಿಗೆ ಆಧ್ಯಾತ್ಮಿಕ, ನೈತಿಕ ಮೌಲ್ಯ ಬೋಧಿಸಲು ಸೃಷ್ಟಿಸಿದ ಸರಳ ಮತ್ತು ಸುಂದರವಾದ ಕನ್ನಡ ಸಾಹಿತ್ಯ ಪ್ರಕಾರವೇ ಈ ವಚನ ಸಾಹಿತ್ಯ. ಇದು ಪ್ರಪಂಚಕ್ಕೆ ಸಮಾನತೆಯ ಸಂದೇಶ ಸಾರಿದೆ.
 ಜನಸಾಮಾನ್ಯರು ನಿತ್ಯ ನುಡಿಯುವಂತಹ ಭಾಷೆಯನ್ನಿಟ್ಟುಕೊಂಡು ಬಸವಣ್ಣ ಸೇರಿದಂತೆ ಅನೇಕ ಬಸವಾದಿ ಶಿವಶರಣರಿಂದ ವಚನಗಳ ರಚನೆಯಾಗಿವೆ. ವಚನ ಸಾಹಿತ್ಯದಲ್ಲಿ ಪ್ರಪಂಚದ ಅರಿವಿದೆ ಎಂದರು.
ಸತ್ಯಶುದ್ಧವಾದ ಕಾಯಕವನ್ನು ಮಾಡಿ ಜೀವನ ಮಾಡಬೇಕು ಎಂದು 12ನೇ ಶತಮಾನದಲ್ಲೇ ಬಸವಣ್ಣನವರಾದಿಯಾಗಿ ಎಲ್ಲ ಶರಣರೂ ತಮ್ಮ ವಚನಗಳಲ್ಲಿ ಹೇಳಿದ್ದಾರೆ. ‘ಕಾಯಕವೇ ಕೈಲಾಸ’ ಎಂಬ ವಚನ ಕೆಲಸ ಕುರಿತು ಮಹತ್ವ ವಿವರಿಸುತ್ತದೆ. ಯಾವುದೇ ಕಾರ್ಯವಾದರೂ ಪ್ರೀತಿ, ವಿಶ್ವಾಸದಿಂದ ಮಾಡಬೇಕು ಎಂದರು.
ಭವಿಷ್ಯದ ಪ್ರಜ್ಞೆಗಳಾಗಿರುವ ಯುವ ಜನರು ವಚನದ ಸಾರವನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು ಎಂದರು. 
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಅನಂತರಾಮು, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ ಇದ್ದರು.
ಬಳಿಕ ವಿದ್ವಾನ್ ಬಳ್ಳಾರಿ ಎಂ.ರಾಘವೇಂದ್ರ ಅವರಿಂದ ವಚನ ಗಾಯ ನಡೆಯಿತು. ಪಕ್ಕದ ವಾದ್ಯದಲ್ಲಿ ವಿದ್ವಾನ್ ಬಿ.ಕೆ.ರಘು ವಯೋಲಿನ್, ವಿದ್ವಾನ್ ತುಮಕೂರು ಬಿ.ರವಿಶಂಕರ್ ಮೃದಂಗ, ವಿದ್ವಾನ್ ಎಂ.ಆರ್.ಮೋಹನ್ ಮೋರ್ಚಿಂಗ್‌ನಲ್ಲಿ ಸಾಥ್ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net