ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ವಾಲ್ಮೀಕಿ ಗಿರಿಜನ ಬುಡಕಟ್ಟು ಆಶ್ರಮ ಶಾಲಾ ಮಕ್ಕಳು ಪಲ್ಸ್ ಪೋಲಿಯೋ ಲಸಿಕ ಅಭಿಯಾನ ಜಾಥಾ ನಡೆಸಿದರು. ಪ್ರತಿಭಾ , ನಿತ್ಯಾ, ಸ್ವಾಮಿ, ಚೇತನ್, ಶೇಖರ್, ದೀಪು, ಪದ್ಮಾ, ನೇತ್ರವತಿ ಇದ್ದರು.
ಹನಗೋಡು: ಐದು ವರ್ಷಗಳೊಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಶಿಕ್ಷಕಿ ಎಂ.ಪ್ರತಿಭಾ ತಿಳಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ವಾಲ್ಮೀಕಿ ಗಿರಿಜನ ಬುಡಕಟ್ಟು ಆಶ್ರಮ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೋಲಿಯೋ ಲಸಿಕ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸುವಲ್ಲಿ ವಿಫಲವಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೀವಿತಾವಧಿಯುದ್ದಕ್ಕೂ ಪೋಲಿಯೋ ರೋಗದ ವಿರುದ್ಧ ರಕ್ಷಣೆ ಪಡೆಯಲು ಲಸಿಕೆ ಹಾಕಿಸುವುದು ಕಡ್ಡಾಯ ಎಂದು ತಿಳಿಸಿದರು.
ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿ ನಿತ್ಯಾ ಮಾತನಾಡಿ, ಆರೋಗ್ಯ ಕೇಂದ್ರ ಹಾಗೂ ಪೋಲಿಯೋ ಬೂತ್‌ಗಳಲ್ಲಿ ಡಿ.21ರಂದು ಬೆಳಗ್ಗೆ 8 ಗಂಟೆಯಿಂದ ಲಸಿಕೆ ಹಾಕಲಾಗುತ್ತದೆ. ಡಿ.22ರಿಂದ 24ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ. ಐದು ವರ್ಷದೊಳಗಿನ ಮಕ್ಕಳನ್ನು ತಪ್ಪದೇ ಪೋಲಿಯೋ ಕೇಂದ್ರಕ್ಕೆ ಕರೆ ತರಬೇಕೆಂದು ಮನವಿ ಮಾಡಿದರು.
ನಂತರ ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಸ್ ಪೋಲಿಯೋ ಜಾಥಾ ನಡೆಸಿದರು. ಶಿಕ್ಷಕರಾದ ಸ್ವಾಮಿ, ಚೇತನ್, ಶೇಖರ್, ದೀಪು, ಪದ್ಮಾ, ಆಶಾ ಕಾರ್ಯಕರ್ತೆ ನೇತ್ರವತಿ ಇದ್ದರು.