ನ್ಯಾಯ, ಶಾಂತಿ ಕಾಪಾಡಲು ಕಾನೂನು ಬಳಸಿ

ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ
ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಕಾನೂನು ಪ್ರಾಧ್ಯಾಪಕ ಡಾ.ಎಂ.ಕೆ. ರಮೇಶ್ ಅಭಿಮತ
  • ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆ
ಮೈಸೂರು: ಕಾನೂನು ಎಂಬುದು ಅನ್ವೇಷಕ ವಿಜ್ಞಾನವಾಗಿದ್ದು, ಸಮಾಜದಲ್ಲಿ ಸುವ್ಯವಸ್ಥೆ, ನ್ಯಾಯ, ಶಾಂತಿ ಕಾಪಾಡಲು, ವೈಜ್ಞಾನಿಕ ತತ್ವವನ್ನು ತಾರ್ಕಿಕ ಚಿಂತೆಯನ್ನು ಸಾಕ್ಷಾೃಧಾರ ಬೆಳೆಸುತ್ತದೆ ಎಂದು ನಿವೃತ್ತ ಕಾನೂನು ಪ್ರಾಧ್ಯಾಪಕ ಡಾ. ಎಂ.ಕೆ. ರಮೇಶ್ ಹೇಳಿದರು.
ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಲ್ಪಿತ ನ್ಯಾಯಾಲಯದ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಮುಂದೆ ವಾದ ಮಂಡಿಸುವ ಕಲೆ ಮತ್ತು ಚತುರತೆ ಕಲಿಸುತ್ತದೆ.
ವಿದ್ಯಾರ್ಥಿಗಳಲ್ಲಿ ಸಂಶೋಧನೆ ಸಾಮರ್ಥ್ಯವನ್ನೂ ಕಲಿಸುತ್ತದೆ. ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳು, ಕಾನೂನು ಅಂಶಗಳನ್ನು ವಿಶ್ಲೇಷಿಸಿ ಎದುರುದಾಳಿಗಳ ವಾದವನ್ನು ತರ್ಕಬದ್ಧವಾಗಿ ಎದುರಿಸುವ ಸಾಮರ್ಥ್ಯವನ್ನು ರೂಢಿಸುತ್ತದೆ. ಹಾಗೆಯೇ, ವಿದ್ಯಾರ್ಥಿ ನ್ಯಾಯಾಧೀಶರ ಮುಂದೆ ಹೇಗೆ ನಡೆದುಕೊಳ್ಳಬೇಕು, ಹೇಗೆ ವಾದ ಮಂಡಿಸಬೇಕು ಎಂಬ ನಿಟ್ಟಿನಲ್ಲಿ ನಡವಳಿಕೆ ಪರಿಚಯಿಸುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಸಾರ್ವಜನಿಕವಾಗಿ ಮಾತನಾಡುವ ಭೀತಿಯನ್ನು ಹೋಗಲಾಡಿಸಿ ಆತ್ಮವಿಶ್ವಾಸ ತುಂಬಿಸುತ್ತದೆ. ಈ ಸ್ಪರ್ಧೆಯು ಒಂದು ಸಂಕೀರ್ಣ ಕಾನೂನು ಸಮಸ್ಯೆಗೆ ಸಂಬಂಧಿಸಿದಂತೆ ಸಂವಿಧಾನ ಕಾನೂನು ಪುಸ್ತಕಗಳು, ಹಿಂದಿನ ನ್ಯಾಯಾಲಯದ ತೀರ್ಪುಗಳನ್ನು ಹುಡುಕಿ ಸಂಶೋಧನೆ ಮಾಡುವುದನ್ನೂ ಕಲಿಸುತ್ತದೆ. ಕಲಿಕೆಯೇ ಗೆಲುವು ಎಂಬ ಧೋರಣೆಯನ್ನು ವಿದ್ಯಾರ್ಥಿಗಳು ಮೂಡಿಸಿಕೊಳ್ಳಬೇಕು ಎಂದರು
ವಿದ್ಯಾವರ್ಧಕ ಸಂಘದ ಗೌರವಾನ್ವಿತ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾಲೇಜಿನ ಸಿ.ಎಂ.ಸಿ. ಅಧ್ಯಕ್ಷ ಎಸ್.ಶಿವಲಿಂಗಯ್ಯ ಮತ್ತು ಕೋಶಾಧ್ಯಕ್ಷ ಶ್ರೀಶೈಲ ರಾಮಣ್ಣನವರ್, ಪ್ರಾಂಶುಪಾಲೆ ಡಾ.ಪಿ.ದೀಪು, ಸಹಾಯಕ ಪ್ರಾಧ್ಯಾಪಕಿ, ಸಂಯೋಜಕಿ ಡಾ. ಶ್ರೀದೇವಿ ಕೃಷ್ಣ ಉಪಸ್ಥಿತರಿದ್ದರು.  ಚೆನ್ನೈ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕದಿಂದ 19 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net