ಸಂಶೋಧನಾ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಿ

ಸಂಶೋಧನಾ ವಿಧಾನದ ಕುರಿತು ಕಾರ್ಯಾಗಾರ
ಸಂಶೋಧನಾ ವಿಧಾನದ ಕುರಿತು ಕಾರ್ಯಾಗಾರ
Published on

ಪ್ರಮುಖ ಮುಖ್ಯಾಂಶಗಳು

  • ಜಾಗತಿಕ ಮಟ್ಟದಲ್ಲಿ ಭಾರತದ ಸಂಶೋಧನಾ ಕ್ಷೇತ್ರದ ಸಾಧನೆ ತೃಪ್ತಿಕರವಾಗಿಲ್ಲ.
  • ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸತ್ಯದ ಹಾದಿ ಹುಡುಕುವ ಕೆಲಸ ಮಾಡಬೇಕು.
 ಮೈಸೂರು: ಪ್ರತಿಯೊಂದು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಂತ್ರಜ್ಞಾನವನ್ನು ಸಂಶೋಧನಾ ಕ್ಷೇತ್ರದಲ್ಲೂ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಹೇಳಿದರು.
ಮೈಸೂರು ವಿವಿ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸಂಶೋಧನಾ ವಿಧಾನದ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ, ಇದೀಗ ಸಂಶೋಧನಾ ವಿಧಾನಗಳು ತ್ವರಿತಗತಿಯಲ್ಲಿ ಬದಲಾಗುತ್ತಿವೆ.
 ಇಂತಹ ಸಂದರ್ಭದಲ್ಲಿ ಯುವ ಸಂಶೋಧಕರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸಂಶೋಧನಾ ಕ್ಷೇತ್ರದ ಸಾಧನೆ ತೃಪ್ತಿಕರವಾಗಿಲ್ಲ. ಈ ಪರಿಸ್ಥಿತಿ ಸುಧಾರಿಸಬೇಕಿದೆ. ತಳಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸತ್ಯದ ಹಾದಿ ಹುಡುಕುವ ಕೆಲಸ ಮಾಡಬೇಕು. ಸಂಶೋಧಕರು ನಿರಂತರವಾಗಿ ಪರಿಶ್ರಮ ಹಾಕಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.
ಸಂಶೋಧಕರು ಅಧ್ಯಯನಶೀಲರಾಗಿರಬೇಕು. ಏನೇ ಕೆಲಸ ಮಾಡಬೇಕಾದರೆ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂಶೋಧನೆಯಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯವಿಲ್ಲ ಎಂದರು.
ವಿಭಾಗದ ಗ್ರಂಥಪಾಲಕಿ ಡಾ.ಪಿ.ಸರಸ್ವತಿ, ಎಂಎಂಟಿಟಿಸಿ ನಿರ್ದೇಶಕಿ ಎಚ್.ಪಿ.ಜ್ಯೋತಿ, ಸಹಾಯಕ ಗ್ರಂಥಪಾಲಕರಾದ ಎ.ಎನ್.ರಮೇಶ್, ಬಿ.ಈರಣ್ಣ ಇನ್ನಿತರರಿದ್ದರು.
*1
ಮೈಸೂರು ವಿವಿ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸಂಶೋಧನಾ ವಿಧಾನದ ಕುರಿತು ಕಾರ್ಯಾಗಾರವನ್ನು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಉದ್ಘಾಟಿಸಿದರು. ಡಾ.ಪಿ.ಸರಸ್ವತಿ, ಎಚ್.ಪಿ.ಜ್ಯೋತಿ, ಎ.ಎನ್.ರಮೇಶ್, ಬಿ.ಈರಣ್ಣ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net