ಕೃಷಿಯಿಂದ ಆಡಳಿತದವರೆಗೆ ಎಐ ಬಳಕೆ

ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂ.ಎಲ್.ಕಾಂತರಾಜ್, ಎಚ್.ಮುರಳಿ, ಶ್ರೀನಿವಾಸ್ ವರದರಾಜನ್ ಇದ್ದರು.
ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂ.ಎಲ್.ಕಾಂತರಾಜ್, ಎಚ್.ಮುರಳಿ, ಶ್ರೀನಿವಾಸ್ ವರದರಾಜನ್ ಇದ್ದರು.
Published on
ಮೈಸೂರು: ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನವೀಗ ಕೃಷಿಯಿಂದ ಆಡಳಿತದವರೆಗೆ ಎಲ್ಲ ಕ್ಷೇತ್ರಗಳನ್ನು ಆವರಿಸಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಭೇರುಂಡ ಫೌಂಡೇಷನ್ ವತಿಯಿಂದ ಮೈರಾ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಒಳಿತಿಗಾಗಿ ಎಐ’ ವಿಷಯ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನರು, ಮಹಿಳೆಯರು, ರೈತರು ಮತ್ತು ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸಲು ಎಐ ಪ್ರಮುಖ ಪಾತ್ರ ವಹಿಸಲಿದೆ. ಸಮುದಾಯ ಸ್ನೇಹಿ ಮತ್ತು ಸ್ಥಳೀಯ ಪರಿಕರಗಳನ್ನು ಪರಿಚಯಿಸುವ ಮೂಲಕ ಎಲ್ಲರ ನಡುವಿನ ಅಂತರವನ್ನು ನಿವಾರಿಸುತ್ತದೆ ಎಂದರು.
ಸೈಬರ್‌ವರ್ಸ್ ಫೌಂಡೇಶನ್ ನಿರ್ದೇಶಕ ಎಂ.ಎಲ್.ಕಾಂತರಾಜ್ ಮಾತನಾಡಿ, ಐಐ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಒಳಿತಿನಲ್ಲಿ ಎಐ ಪಾತ್ರದ ಬಗ್ಗೆ ತಿಳಿಸಿದರು.
ಬೆಂಗಳೂರಿನ ಎಸ್‌ಟಿಪಿಐನ ನಿರ್ದೇಶಕ ಡಾ.ಸಂಜಯ್ ತ್ಯಾಗಿ ಆನ್‌ಲೈನ್ ಮೂಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೆಡ್ ಹೆಲ್ಡ್ ಹೈ ಫೌಂಡೇಷನ್‌ನ ಎಚ್.ಮುರಳಿ, ಶ್ರೀನಿವಾಸ್ ವರದರಾಜನ್, ವ್ಯವಸ್ಥಾಪಕ ಟ್ರಸ್ಟಿ ಮೈರಾ ಸ್ಕೂಲ್ ಆಫ್ ಬ್ಯುಸಿನೆಸ್‌ನ ಮದನ್ ಪದಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net