ಅಧಿಕಾರ ಸ್ವೀಕರಿಸಿದ ಡಾ.ಎಂ.ಪಿ. ವರ್ಷ ಮಾತನಾಡಿ, ಕ್ಲಬ್ನಿಂದ ಅನುಷ್ಠಾನಗೊಳಿಸಿದ ಕೆರೆ ಪುನರುಜ್ಜೀವನ, ಶಾಲೆಗಳಲ್ಲಿ ಮಳೆನೀರು ಕೊಯ್ಲು ಘಟಕ ನಿರ್ಮಾಣ, ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ದೇಶದ ಪ್ರಖ್ಯಾತ ಸಂಸ್ಥೆ ಇಸ್ರೋ ಗೆ ಕರೆದೊಯ್ಯುವುದು, ಶ್ರೀಲಂಕಾ ದೇಶದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ, ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ ದಕ್ಷಿಣ ಏಷ್ಯಾವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ಸಂಗತಿ. ಸುಮಾರು 1.20 ಕೋಟಿ ರೂ.ಗೆ ಹೆಚ್ಚಿನ ಮೊತ್ತದ ಸೇವಾ ಕಾರ್ಯಗಳನ್ನು ಅನುಷ್ಠಾನ ಮಾಡಲಾಗಿದೆ ಎಂದರು.