ಎರಡುದಿನ ಸಂಗೀತ ಕಾರ್ಯಕ್ರಮ

ಸಂಗೀತ ಕಾರ್ಯಕ್ರಮ
ಸಂಗೀತ ಕಾರ್ಯಕ್ರಮ
Published on
ಮೈಸೂರು: ಜನ ಚೈತನ್ಯ ಫೌಂಡೇಷನ್ ವತಿಯಿಂದ ‘ಸರಿಗಮ-ಪದನಿಸ ಬಹುಭಾಷಾ ಸಂಗೀತ ಕಾರ್ಯಕ್ರಮ’ವನ್ನು ಫೆ.4, 5ರಂದು ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರ ರಾಗ ಸಂಯೋಜನೆಯಲ್ಲಿ ಖ್ಯಾತ ಹಿನ್ನೆಲೆಗಾಯಕರು ಹಾಡಿರುವ ಬಹುಭಾಷಾ ಜನಪ್ರಿಯ ಗೀತೆಗಳನ್ನು 20ಕ್ಕೂ ಹೆಚ್ಚು ಗಾಯಕ, ಗಾಯಕಿಯರು ಪ್ರತಿದಿನ ಸಂಜೆ 4.30ರಿಂದ ರಾತ್ರಿ 9.30ರವರೆಗೆ ಪ್ರಸ್ತುತ ಪಡಿಸಿಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್, ಸಮಾಜ ಸೇವಕ ರಘುರಾಂ ವಾಜಪೇಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ವೈದ್ಯೆ ಡಾ.ರೇಖಾ ಅರುಣ್, ಆನಂದ್ ಶೆಟ್ಟಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ಡಾ.ನಾಗರಾಜ್ ವಿ.ಭೈರಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಯ್ಸ ವೈಶಾಕ್, ಬಿ.ಎಸ್.ವಿಜಯ್ ಆನಂದ್, ಬಿ.ಎಂ.ಮಹದೇವಯ್ಯ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net