ಹಸು ಕಳ್ಳತನ ಮಾಡಿದ್ದ ಇಬ್ಬರ ಬಂಧನ

ಅಪರಾಧ
ಅಪರಾಧ
Published on

ಪ್ರಮುಖ ಮುಖ್ಯಾಂಶಗಳು

  • ಉಳಿದಿಬ್ಬರ ಪತ್ತೆಗಾಗಿ ಪೊಲೀಸರಿಂದ ಶೋಧ
  • ವೈಜ್ಞಾನಿಕ ಸಾಕ್ಷಾೃಧಾರಗಳ ಆಧಾರದ ಮೇಲೆ ಪ್ರಕರಣವನ್ನು ಭೇದಿಸಿದ ಪೊಲೀಸರು
  • 30 ಸಾವಿರ ರೂ. ನಗದು, ಎರಡು ಕಾರುಗಳನ್ನು ಜಪ್ತಿ
ಮೈಸೂರು: ನಂಜನಗೂಡಿನ ಒಕ್ಕಲಗೇರಿಯಲ್ಲಿ ಐದು ಹಸು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಬಂಧಿಸಲಾಗಿದೆ.
ನಗರದ ಕೆಸರೆ ನಿವಾಸಿಗಳಾದ ಸುಲೇಮಾನ್, ಸಿದ್ದಿಕ್ ಪಾಷಾ ಬಂಧಿತರು. ಜ.6ರಂದು ಹಸು ಕಳ್ಳತನವಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ, ಇತರ ವೈಜ್ಞಾನಿಕ ಸಾಕ್ಷಾೃಧಾರಗಳ ಆಧಾರದ ಮೇಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ. 
ಇವರಿಂದ 30 ಸಾವಿರ ರೂ. ನಗದು, ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿದಿದೆ. 
ಕದ್ದಿರುವ ಹಸುವನ್ನು ನಗರದ ಕೆಸರೆಯ ಉಸ್ಮಾನಿಯ ಬ್ಲಾಕ್ ಕಸಾಯಿಖಾನೆಗೆ ಮಾರಾಟ ಮಾಡಿದ್ದಾರೆ. ಇವರು ಈ ಹಿಂದೆ ನಂಜನಗೂಡು, ಎಚ್.ಡಿ.ಕೋಟೆ, ತಿ.ನರಸೀಪುರ, ಬಿಳಿಗೆರೆ, ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 5 ಪ್ರಕರಣಗಳು ಪತ್ತೆಯಾಗಿವೆ.
ಸುಲೇಮಾನ್ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ 1, ಸಿದ್ದಿಕ್ ವಿರುದ್ಧ ಎನ್‌ಆರ್ ಪೊಲೀಸ್ ಠಾಣೆಯಲ್ಲಿ 2, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿರುತ್ತದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net