1992ರಲ್ಲಿ ಸಿಆರ್‌ಪಿಎಫ್‌ಗೆ ಕಾನ್‌ಸ್ಟೇಬಲ್ ಆಗಿ ಸೇವೆ ಆರಂಭಿಸಿದ ತ್ರೀವೇಣಿ ಬಾಯಿ 2001ರಲ್ಲಿ ಎಎಸ್‌ಐ ಆಗಿ ಮತ್ತು 2021ರಲ್ಲಿ ಎಸ್‌ಐ ಆಗಿ ಪದೋನ್ನತಿ ಹೊಂದಿದ್ದರು. ಇದೀಗ 2026-27ನೇ ಸಾಲಿನಲ್ಲಿ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ್ದಾರೆ. ತಮ್ಮ ಸೇವಾವಧಿಯಲ್ಲಿ ಈವರೆಗೆ ಶ್ರೀನಗರದಲ್ಲಿ 8 ವರ್ಷಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹುಲ್ಯಾಳು ಗ್ರಾಮದ ಜನತೆ ತ್ರಿವೇಣಿ ಬಾಯಿ ಕಾಳಿಂಗೆ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.