ಏಕಲವ್ಯ ಶಾಲೆಯಲ್ಲಿ ಆದಿವಾಸಿ ಮಕ್ಕಳಿಗಿಲ್ಲ ಅವಕಾಶ

Ekalavya School Building
Ekalavya School Building
Published on

ಕರ್ನಾಟಕ ಲ್ಯಾಂಪ್ಸ್ ತಾಲೂಕು ಘಟಕ ಅಧ್ಯಕ್ಷ ಶೈಲೇಂದ್ರ ಆರೋಪ

ಎಚ್.ಡಿ.ಕೋಟೆ: ಆದಿವಾಸಿಗಳಾದ ನಾವು ಪುನರ್ವಸತಿಯಾಗುವ ಸಮಯದಲ್ಲಿ ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಏಕಲವ್ಯ ಶಾಲೆ ತೆರಯಲಾಗಿದ್ದು ಈ ಶಾಲೆಯಲ್ಲಿ ನಮ್ಮ ಆದಿವಾಸಿಗಳಿಗೆ ಅವಕಾಶ ದೊರೆಯದ ಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ಲ್ಯಾಂಪ್ಸ್ ತಾಲೂಕು ಘಟಕ ಅಧ್ಯಕ್ಷ ಶೈಲೇಂದ್ರ ಆರೋಪಿಸಿದರು.
ರಾಜ್ಯ ಸರ್ಕಾರದ ಕ್ರೈಸ್ಟ್ ಸಹಯೋಗದಲ್ಲಿ ಆದಿವಾಸಿಗಳು ಮಕ್ಕಳಿಗೆ ಮುಕ್ತ ಅವಕಾಶವಿತ್ತು, ಕಳೆದ ಎರಡು ವರ್ಷದಿಂದ ಸೆಂಟ್ರಲ್ ಸಿಲಬಸ್ ಬಂದ ಬಳಿಕ ಆದಿವಾಸಿ ಮಕ್ಕಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಆದಿವಾಸಿಗಳತ್ತ ಗಮನಹರಿಸಿ ಸೂಕ್ತ ಫಲಾನುಭವಿಗಳಾದ ಆದಿವಾಸಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಕಾಳ ಕಲ್ಕರ್ ಮಾತನಾಡಿ, ಏಕಲವ್ಯ ಶಾಲೆಯ ಆರನೇ ತರಗತಿಯಲ್ಲಿ 60 ಮಕ್ಕಳ ದಾಖಲಾತಿ ಇದೆ. ಆದರೆ ನಮ್ಮ ಮಕ್ಕಳು ಕೇವಲ 5 ಮಕ್ಕಳು ಮಾತ್ರ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇನ್ನೂ 15 ವಿದ್ಯಾರ್ಥಿಗಳು ಪ್ರವೇಶಾತಿಯಿಂದ ವಂಚಿತರಾಗಿದ್ದಾರೆ ಎಂದು ಬೇಸರಿಸಿದ್ದರು. ಕೇಂದ್ರೀಯ ಶಿಕ್ಷಣ ನೀತಿಗೆ ಒಳಪಟ್ಟಿರುವುದರಿಂದ ಸಂಸದರು ಆದಿವಾಸಿ ಮಕ್ಕಳಿಗೆ ಮುಕ್ತವಾಗಿ ಓದಲು ನೀತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುರೇಂದ್ರ, ಕೃಷ್ಣ, ಪ್ರೇಮಾ, ಕಿರುಮಾದಿ, ಗಣೇಶ್, ಆನಂದ, ಚಿಕ್ಕಮಾರ, ದಾಸಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net