ಜ.5ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

ಶ್ರೀ ನಟರಾಜ ಸ್ವಾಮೀಜಿ
ಶ್ರೀ ನಟರಾಜ ಸ್ವಾಮೀಜಿ
Published on

ಗಾವಡಗೆರೆ ಶ್ರೀ ಗುರುಲಿಂಗಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮಾಹಿತಿ

ಹುಣಸೂರು: ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸಮಾಧಾನದ ಬದುಕಿಗಾಗಿ ಗಾವಡಗೆರೆ ಶ್ರೀ ಗುರುಲಿಂಗಜಂಗಮ ದೇವರ ಶ್ರೀಮಠದ ವತಿಯಿಂದ ಆಯೋಜನೆಗೊಂಡಿರುವ ಮಲೆಮಹದೇಶ್ವರಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಕಾರ್ಯಕ್ರಮವು ಜ.5ರಂದು ಶ್ರೀಕ್ಷೇತ್ರದಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಮಠದ ಶ್ರೀ ನಟರಾಜ ಸ್ವಾಮೀಜಿ ತಿಳಿಸಿದರು.
ಹತ್ತನೇ ವರ್ಷದ ಈ ಪಾದಯಾತ್ರೆ ಕಾರ್ಯಕ್ರಮವು ಮಠದ ಭಕ್ತರು ಮತ್ತು ಬೆಟ್ಟದ ಬಳಗದ ವತಿಯಿಂದ ಸಂಪ್ರದಾಯದಂತೆ ಆಚರಿಸಲಾಗುತ್ತಿದೆ. ಆರಂಭದ ದಿನ ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು ಪಾದಯಾತ್ರೆಯ ಉದ್ದಕ್ಕೂ 4 ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ. ಒತ್ತಡಗಳ ಬದುಕು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವಂತಾಗಲು, ಮನುಷ್ಯನ ವ್ಯಾಘ್ರ ಮನಸ್ಥಿತಿಯನ್ನು ಸ್ಥಿಮಿತಕ್ಕೆ ತರಲು, ಈ ಭಾಗದ ರೈತನ ಮೊಗದಲ್ಲಿ ಸಮಾಧಾನ ಮತ್ತು ಮಂದಹಾಸ ಮೂಡುವಂತಾಗಲಿ ಎನ್ನುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆಧ್ಯಾತ್ಮಿಕತೆ ಮನಷ್ಯನ ಮನಸ್ಸಿಗೆ ಟಾನಿಕ್ ನೀಡುತ್ತದೆ. ಇದು ಇಂದಿನ ಅಗತ್ಯವಾಗಿದೆ ಎಂದರು. ರಾತ್ರಿ ವಾಸ್ತವ್ಯ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಊಟದ ವ್ಯವಸ್ಥೆಯನ್ನು ಭಕ್ತರು ನಿರ್ವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಪಾದಯಾತ್ರೆಯ ವ್ಯವಸ್ಥಾಪಕರು ಮಠದ ಮೇಲ್ವಿಚಾರಕಿ ಶಿಲ್ಪಾ ಮಂಜುನಾಥ್, ಸಂಚಾಲಕರಾದ ಮಲ್ಲೇಶ್, ವಿಜಯ್, ಮಂಜುನಾಥ್, ಆದರ್ಶ, ದೀಪು, ಶಿವಕುಮಾರ್, ಜಗದೀಶ್ ಇದ್ದರು. ಪಾದಯಾತ್ರೆ ಕುರಿತಾಗಿ ಹೆಚ್ಚಿನ ಮಾಹಿತಿಗೆ ಮೊ: 99456 13736, 94818 20946, ಸಂಪರ್ಕಿಸಲು ಕೋರಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net