ಹುಲಿ ಸೆರೆಗಾಗಿ ಬೋನು

ಹನಗೋಡಿಗೆ ಸಮೀಪದ ಹೆಮ್ಮಿಗೆಯಲ್ಲಿ ಜಾನುವಾರು ಬಲಿಪಡೆದಿದ್ದ ಜೋಳದ ಹೊಲದಲ್ಲಿ ಹುಲಿ ಸೆರೆಗಾಗಿ ಬೋನು ಇರಿಸಲಾಗಿದೆ.
ಹನಗೋಡಿಗೆ ಸಮೀಪದ ಹೆಮ್ಮಿಗೆಯಲ್ಲಿ ಜಾನುವಾರು ಬಲಿಪಡೆದಿದ್ದ ಜೋಳದ ಹೊಲದಲ್ಲಿ ಹುಲಿ ಸೆರೆಗಾಗಿ ಬೋನು ಇರಿಸಲಾಗಿದೆ.
Published on
ಹನಗೋಡು: ಸಮೀಪದ ಬೀರತಮ್ಮನಹಳ್ಳಿ ಅರಣ್ಯ ಪ್ರದೇಶದಂಚಿನ ಹೆಮ್ಮಿಗೆ ಬಳಿಯಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಮ್ಮಿಗೆ ಹಾಗೂ ಬಿ.ಆರ್.ಕಾವಲ್ ಗ್ರಾಮಗಳ ಜಮೀನಿನಲ್ಲಿ ಅರಣ್ಯ ಇಲಾಖೆ ಶುಕ್ರವಾರ ಬೋನು ಇಟ್ಟಿದೆ.
ಹೆಮ್ಮಿಗೆ, ಕಾಮಗೌಡನಹಳ್ಳಿ, ಬಿ.ಆರ್.ಕಾವಲ್, ಗೌಡಿಕೆರೆ ಗ್ರಾಮಗಳ ಹತ್ತಾರು ಜಾನುವಾರುಗಳನ್ನು ಹುಲಿಯು ಬಲಿ ಪಡೆದಿದೆ. ಹೀಗಾಗಿ ಇದರ ಸೆರೆಗೆ ಬೋನು ಇಡಲಾಗಿದೆ. ಇದಲ್ಲದೆ ಹುಲಿ ಪತ್ತೆಗಾಗಿ ಆರ್‌ಎಫ್‌ಒ ಸುಬ್ರಮಣ್ಯ ನೇತೃತ್ವದಲ್ಲಿ ಥರ್ಮಲ್ ಡ್ರೋನ್ ಹಾಗೂ ಸಾಕಾನೆಗಳ ಸಹಾಯದಿಂದ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net