ಹೆಳವರ ಹುಂಡಿ ರಾಜೇಶ್ ಆಯ್ಕೆ

ತಿ.ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ನೂತನ ಅಧ್ಯಕ್ಷ ಹೆಳವರಹುಂಡಿ ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ಕನ್ನಹಳ್ಳಿ ಪಾಪಣ್ಣ, ಸಿದ್ದರಾಜು, ಮನು ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ನೂತನ ಅಧ್ಯಕ್ಷ ಹೆಳವರಹುಂಡಿ ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ಕನ್ನಹಳ್ಳಿ ಪಾಪಣ್ಣ, ಸಿದ್ದರಾಜು, ಮನು ಇತರರು ಇದ್ದರು.
Published on
ತಿ.ನರಸೀಪುರ : ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಹೆಳವರ ಹುಂಡಿ ರಾಜೇಶ್ ಅವರು ಆಯ್ಕೆಯಾಗಿದ್ದಾರೆ.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಭಾನುವಾರ ನೂತನ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಸಂಘಟನೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಮುಂದಿಂದ ಕಾರ್ಯದ ರೂಪು ರೇಷೆಗಳನ್ನು ಬಗ್ಗೆ ಚರ್ಚಿಸಲಾಯಿತು.
ನೂತನ ಅಧ್ಯಕ್ಷ ರಾಜೇಶ್ ಮಾತನಾಡಿ, ಈ ಹಿಂದೆ ನಾನು ಭಾರತ ಮಾತೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು, ಅಧಿಕಾರಿಗಳ ಸಹಕಾರದಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮದುವೆ ವೆಚ್ಚ, ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನೂ ಕೊಡಿಸಿದ್ದೇನೆ. ಆದ್ದರಿಂದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಿರುವ ಕೆಲಸ ನನಗೆ ತೃಪ್ತಿ ತಂದಿದೆ.ಈಗ ಹಿಂದಿನ ಸಂಘಕ್ಕೆ ರಾಜೀನಾಮೆ ನೀಡಿ, ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘ (ರಿ ) ಎಂಬ ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದು. ಇದರ ಉದ್ದೇಶ ಕಾರ್ಮಿಕರಿಗೆ ಆಶ್ರಯವಾಗಿ ನಿಲ್ಲಬೇಕು. ನಮ್ಮಲ್ಲಿ ನೋಂದಣೆ ಮಾಡಿಕೊಳ್ಳುವವರು, ನೂತನವಾಗಿ ಕಟ್ಟಡವನ್ನು ಕಟ್ಟಿಸುವ ಮಾಲಿಕ 5,000 ರೂ. ಇದರಲ್ಲಿ ಕೆಲಸ ಮಾಡುವ ಮೇಸರಿ 2500.ರೂ ಮತ್ತು ಕೆಲಸ ಮಾಡುವ ಕಾರ್ಮಿಕರು 1000,ರೂ ಕಟ್ಟಿ ಸದಸ್ಯತ್ವ ಪಡೆದುಕೊಳ್ಳಬೇಕು. ಕಾರ್ಮಿಕರು ಕಟ್ಟಡ ಕೆಲಸ ಮಾಡುವಾಗ ನೋವುಂಟಾದರೆ 12 ಲಕ್ಷ ತನಕ ವಿಮೆ ಮಾಡಿಸಲಾಗುವುದು ಮತ್ತು ಅವರು ಗುಣಮುಖರಾಗೋ ತನಕ ಪ್ರತಿನಿತ್ಯ ವೆಚ್ಚಕ್ಕೆ ಹಣ ನೀಡಲಾಗುವುದು ಆದ್ದರಿಂದ ಹಣವನ್ನು ಕಟ್ಟಿಸಿಕೊಳ್ಳುತ್ತೇವೆ. ಇಷ್ಟೇ ಅಲ್ಲದೆ ಕಾರ್ಮಿಕ ಇಲಾಖೆಯಿಂದ ಬರುವಂತ ಎಲ್ಲಾ ಸವಲತ್ತುಗಳನ್ನು ಅವರ ಕುಟುಂಬಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಕನ್ನಹಳ್ಳಿ ಪಾಪಣ್ಣ, ಉಪಾಧ್ಯಕ್ಷರಾಗಿ ಸಿದ್ದರಾಜು, ಪ್ರಧಾನ ಕಾರ್ಯದರ್ಶಿಯಾಗಿ ಮನು, ಖಜಾಂಚಿಯಾಗಿ ಪ್ರತಾಪ್, ಕಾರ್ಯದರ್ಶಿಯಾಗಿ ಮಹೇಶ, ಸಂಘಟನಾ ಕಾರ್ಯದರ್ಶಿಯಾಗಿ ನಿಂಗರಾಜು, ಸಹ ಕಾರ್ಯ ದರ್ಶಿಯಾಗಿ ಸುರೇಶ, ನಿರ್ದೇಶಕರುಗಳಾಗಿ ಶಿವಣ್ಣ, ಬಸವರಾಜು, ಶಿವು, ನಾಗರಾಜು ಹಾಗೂ ಸುಭಾಷ್ ಅವರನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net