ನಗರದ ಹಾಡಿರ್ಂಜ್ ವೃತ್ತದ ಬಳಿಯ ಸಂಭ್ರಮ ವೃತ್ತದಲ್ಲಿ ಶನಿವಾರ ಸಂಜೆ 4.30ರ ಸುಮಾರಿನಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಬೇವಿನ ಮರ ಧರೆಗುರುಳಿದೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಮತ್ತು ಕಾರಿನ ಮೇಲೆ ಮರ ಬಿದ್ದಿದೆ. ಆಟೋದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಜತೆಗೆ ಎರಡು ದ್ವಿಚಕ್ರ ವಾಹನಗಳು ಹಾನಿಗೊಳಗಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಳುಗಳನ್ನು ಕೂಡಲೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಪಾಲಿಕೆ ಅಭಯ ತಂಡ ಮರವನ್ನು ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು.