ಮೈಸೂರು ನಗರ ಪಾಲಿಕೆಯ ಮೂವರು ಅಧಿಕಾರಿಗಳು ಅಮಾನತು

ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ
Published on
ಮೈಸೂರು: ಪೌರ ಕಾರ್ಮಿಕರಿಗೆ ಗೈರು ಹಾಜರಾದ ದಿನಗಳಿಗೂ ವೇತನ ಪಾವತಿ ಮಾಡಿದ ಆರೋಪದ ಮೇರೆಗೆ ನಗರ ಪಾಲಿಕೆಯ ಮೂವರು ಅಧಿಕಾರಿಗಳನ್ನು ಆಯುಕ್ತ ಶೇಖ್ ತನ್ವೀರ್ ಆಸೀಫ್ ಬುಧವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಥಮದರ್ಜೆ ಸಹಾಯಕಿಯರಾದ ಕೆ.ಎಲ್.ಸಿ. ಪಾಪ, ಎಂ. ಪುಷ್ಪಾವತಿ ಹಾಗೂ ದ್ವಿತೀಯದರ್ಜೆ ಸಹಾಯಕಿ ಎಚ್.ಸಿ. ಅನಿತಾ ಅಮಾನತುಗೊಂಡವರು.
ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಕೆಲವು ಪೌರ ಕಾರ್ಮಿಕರು ಗೈರು ಹಾಜರಾಗಿದ್ದರು. ನಿಯಮದ ಪ್ರಕಾರ ಗೈರು ಹಾಜರಿಗೆ ವೇತನ ಕಡಿತ ಮಾಡಬೇಕಾಗಿತ್ತು. ಆದರೆ, ಪೂರ್ಣ ಪ್ರಮಾಣದ ವೇತನ ನೀಡಿರುವುದು ಪರಿಶೀಲನೆ ವೇಳೆಯಲ್ಲಿ ಕಂಡು ಬಂತು.
ಪ್ರಥಮದರ್ಜೆ ಸಹಾಯಕಿ ಕೆ.ಎಲ್.ಸಿ. ಪಾಪ ಸೆಪ್ಟೆಂಬರ್ ತಿಂಗಳಿನಲ್ಲಿ 4,25,273 ರೂ., ಅಕ್ಟೋಬರ್ ತಿಂಗಳಿನಲ್ಲಿ 4,07,793 ರೂ., ನವೆಂಬರ್ ತಿಂಗಳಿನಲ್ಲಿ 5,25,455 ರೂ.ಗಳನ್ನು ಗೈರು ಹಾಜರಾತಿ ದಿನಗಳಿಗೂ ವೇತನವಾಗಿ ಪಾವತಿ ಮಾಡಿದ್ದಾರೆ. ಅದೇ ರೀತಿ ಪ್ರಥಮದರ್ಜೆ ಸಹಾಯಕಿ ಪುಷ್ಪಾವತಿ ಸೆಪ್ಟೆಂಬರ್‌ನಲ್ಲಿ 10,883 ರೂ., ಅಕ್ಟೋಬರ್‌ನಲ್ಲಿ 42,916 ರೂ., ನವೆಂಬರ್‌ನಲ್ಲಿ 63,282 ರೂ., ್ವತೀಯದರ್ಜೆ ಸಹಾಯಕಿ ಎಚ್.ಸಿ. ಅನಿತಾ ಸೆಪ್ಟೆಂಬರ್‌ನಲ್ಲಿ 83,566 ರೂ., ಅಕ್ಟೋಬರ್‌ನಲ್ಲಿ 36,370 ರೂ., ನವೆಂಬರ್‌ನಲ್ಲಿ 34,769 ರೂ. ಪಾವತಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net