ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆಯ ಬಗ್ಗೆ ರಬ್ಬಿಶ್ ಎಂದು ಹೇಳಿರುವ ಕುರಿತು ಲೇವಡಿ ಮಾಡಿದ ಎಚ್‌ಡಿಕೆ, ನಾನು ಹೇಳಿದ್ದು ಹಾಗಿರಲಿ, ನಾನು ಹೇಳಿದ್ದನ್ನೇ ಜನರೂ ಹೇಳುತ್ತಿದ್ದಾರಲ್ಲ, ಅದಕ್ಕೆ ಏನು ಹೇಳುತ್ತೀರಿ? ಅದರಲ್ಲಿ ನಾನೇನು ತಪ್ಪು ಹೇಳಿದ್ದೇನೆ? ಇದ್ದಿದ್ದನ್ನು ಹೇಳಿದ್ದೇನೆ ಅಲ್ಲವೇ? ಎಂದು ಕುಟುಕಿದರು.