ಸಿದ್ದಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿದರು. ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ.ಎಂ.ಮಾಯಾದೇವಿ, ಸವಿತಾ, ಪ್ರೊ.ತ್ರಿವೇಣಿ ಇದ್ದರು.
Published on:
Copied
Follow Us
ಮೈಸೂರು: ಕುವೆಂಪು ಅವರ ದೂರದರ್ಶಿತ್ವದ ಫಲವಾದ ಮೈಸೂರು ವಿವಿ ಪ್ರಸಾರಾಂಗ ಜ್ಞಾನವನ್ನು ಪಸರಿಸುವಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಸಿದ್ದಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕಗಳ ಪ್ರಕಟಣೆ, ವಿಶೇಷ ಉಪನ್ಯಾಸಗಳು, ಮಾನವಿಕ ಪ್ರಬುದ್ಧ ಕರ್ನಾಟಕದಂತಹ ಪತ್ರಿಕೆಗಳ ಮೂಲಕ ನಾಡಿನಾದ್ಯಂತ ಜ್ಞಾನವನ್ನು ಪಸರಿಸುತ್ತಾ ಬಂದಿರುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಚನ ಸಾಹಿತ್ಯ ಮತ್ತು ಸ್ತ್ರೀವಾದ ವಿಷಯ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಮಾತನಾಡಿ, ಸ್ತ್ರೀವಾದದ ಸಾಮಾಜಿಕ ಹಿನ್ನೆಲೆ, ವಚನಕಾರರ ಪ್ರಗತಿಪರ ಚಿಂತನೆಗಳು, ವಚನಕಾರರ ಮಾನವತಾವಾದಿ ಆಲೋಚನೆ, ಬಸವಾದಿ ಶರಣರ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಾಂಶುಪಾಲರಾದ ಪ್ರೊ.ಎಂ.ಮಾಯಾದೇವಿ, ಐಕ್ಯೂಎಸಿ ಸಂಚಾಲಕಿ ಸವಿತಾ, ಪ್ರೊ.ತ್ರಿವೇಣಿ, ರೇವಣಸ್ವಾಮಿ, ಮೋಹನ್ ಕುಮಾರ್, ದಿವ್ಯಾ ಜ್ಯೋತಿ, ಪುಷ್ಪಾ ಇದ್ದರು.