ಸೌಕರ್ಯ ನೀಡುವಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯ

ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಶಾಸಕ ಕೆ. ವೆಂಕಟೇಶ್ ಅವರನ್ನು ಮಾನಸ ಸೇವಾ ಸಂಸ್ಥೆ ಸದಸ್ಯರು ಸ್ವಾಗತಿಸಿದರು. ಡಿ.ಟಿ. ಸ್ವಾಮಿ, ರಾಮತ್ ಜಾನ್ ಬಾಬು, ಕೆ. ಹೊಲದಪ್ಪ ಇತರರಿದ್ದರು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಶಾಸಕ ಕೆ. ವೆಂಕಟೇಶ್ ಅವರನ್ನು ಮಾನಸ ಸೇವಾ ಸಂಸ್ಥೆ ಸದಸ್ಯರು ಸ್ವಾಗತಿಸಿದರು. ಡಿ.ಟಿ. ಸ್ವಾಮಿ, ರಾಮತ್ ಜಾನ್ ಬಾಬು, ಕೆ. ಹೊಲದಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ. ವೆಂಕಟೇಶ್ ಹೇಳಿಕೆ
ರಾವಂದೂರು: ಗ್ರಾಮೀಣ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯ ಎಂದು ಶಾಸಕ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಪರಿಮಿತಿ ರಸ್ತೆ ಕಾಮಗಾರಿ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾವಂದೂರು ಗ್ರಾಮದ ಹೋಬಳಿ ಕೇಂದ್ರಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಹಾಗೂ ಜನರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾನಸ ಸೇವಾ ಸಂಸ್ಥೆಯ ಸರ್ವ ಸದಸ್ಯರು ಮಾಜಿ ಸಚಿವರನ್ನು ಅಭಿನಂದಿಸಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ. ಸ್ವಾಮಿ, ರಾಮತ್ ಜಾನ್ ಬಾಬು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ. ಹೊಲದಪ್ಪ, ಮುಖಂಡರಾದ ಜಿ.ಪಂ. ಮಾಜಿ ಸದಸ್ಯ ಆರ್.ಎಸ್. ಚಿಕ್ಕವೀರಪ್ಪ, ಮಾದೇಶ್ವರ ಪ್ರಾಧಿಕಾರದ ನಿರ್ದೇಶಕ ಕುಮಾರವಿಜಯ್ , ಕೆಲ್ಲೂರು ನಾಗರಾಜ್, ಆರ್.ವಿ. ವಿಶ್ವನಾಥ್, ವಿಕ್ರಂ ರಾಜ ಅರಸ್, ಎಸ್. ಸುರೇಶ್, ಎಚ್.ಎಸ್. ಸ್ವಾಮಿ, ವಿಜೇಂದ್ರ , ಕೀರ್ತಿ, ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ , ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಹಾಗೂ ಎಂ.ಸಿ. ಪ್ರಶಾಂತ್, ಡಾ. ಶಂಕರ್, ತಾಲೂಕಿನ ವಿವಿಧ ಅಧಿಕಾರಿಗಳು ಮತ್ತು ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net