ರಾಷ್ಟ್ರ ನಿರ್ಮಾಣಕ್ಕೆ ಯುವಜನರ ಸಾಮರ್ಥ್ಯ ಮುಖ್ಯ: ಎಂ.ಎನ್.ನಟರಾಜ್ ಹೇಳಿಕೆ

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್ಎಚ್‌ಪಿ), ವಿದ್ಯಾವಿಕಾಸ ಬಿ.ಇಡಿ ಕಾಲೇಜು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಎಂ.ಎನ್.ನಟರಾಜ್ ಉದ್ಘಾಟಿಸಿದರು. ಸರಸ್ವತಿ , ಪ್ರೊ.ವಿ.ಕೆ. ಜೋಸ್, ಎಂ.ಎನ್.ದಿನೇಶ್, ಕೆ.ಎಸ್ ಶಿಲ್ಪ, ಮಹೇಶ್, ಮೆರಿಟೀನಾ ಇತರರು ಇದ್ದರು.
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್ಎಚ್‌ಪಿ), ವಿದ್ಯಾವಿಕಾಸ ಬಿ.ಇಡಿ ಕಾಲೇಜು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಎಂ.ಎನ್.ನಟರಾಜ್ ಉದ್ಘಾಟಿಸಿದರು. ಸರಸ್ವತಿ , ಪ್ರೊ.ವಿ.ಕೆ. ಜೋಸ್, ಎಂ.ಎನ್.ದಿನೇಶ್, ಕೆ.ಎಸ್ ಶಿಲ್ಪ, ಮಹೇಶ್, ಮೆರಿಟೀನಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವಕರು ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕು
  • ವಿಶ್ವದಲ್ಲೇ ಅತಿ ಹೆಚ್ಚು ಯುವಜನಸಂಖ್ಯೆ ಹೊಂದಿರುವ ದೇಶ ಭಾರತ
ಮೈಸೂರು:ಯುವಜನರು ತಮ್ಮೊಳಗಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತುಕೊಂಡು ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ನೆಹರು ಯುವ ಕೇಂದ್ರದ ಪ್ರಾದೇಶಿಕ ನಿವೃತ್ತ ನಿರ್ದೇಶಕ ಎಂ.ಎನ್.ನಟರಾಜ್ ಹೇಳಿದರು.
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್ಎಚ್‌ಪಿ), ವಿದ್ಯಾವಿಕಾಸ ಬಿ.ಇಡಿ ಕಾಲೇಜು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಯಂ ಪ್ರೇರಣೆಯನ್ನು ಬೆಳಗಿಸಿ, ವಿಶ್ವದ ಮೇಲೆ ಪರಿಣಾಮ ಬೀರಿರಿ ಎಂಬ ಈ ವರ್ಷದ ಯುವ ದಿನಾಚರಣೆಯ ಘೋಷಣೆಯು ಯುವಜನರಿಗೆ ತಮ್ಮೊಳಗಿನ ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತುಕೊಂಡು ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಬಳಸುವಂತೆ ಪ್ರೇರೇಪಿಸುತ್ತದೆ ಎಂದರು.
ಸ್ವಯಂ ಪ್ರೇರಣೆ ಎಂಬುದು ಹೊರಗಿನ ಒತ್ತಡವಿಲ್ಲದೆ ತಮ್ಮ ಗುರಿಯನ್ನು ಗುರುತಿಸಿ ಸಾಧಿಸುವ ಮನೋಭಾವವಾಗಿದ್ದು, ಇದು ಯುವಜನರಲ್ಲಿ ಬೆಳೆಯುವ ಮೂಲಕ ಅವರು ಸವಾಲುಗಳ ನಡುವೆಯೂ ಧೈರ್ಯದಿಂದ ಮುಂದೆ ಸಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಸುಮಾರು 45 ಕೋಟಿಯಷ್ಟು 15 ರಿಂದ 29 ವರ್ಷದೊಳಗಿನ ಯುವಕರು ಇದ್ದು, ವಿಶ್ವದಲ್ಲೇ ಅತಿ ಹೆಚ್ಚು ಯುವಜನಸಂಖ್ಯೆ ಹೊಂದಿರುವ ದೇಶವಾಗಿದೆ. ಯುವಜನರ ಶಕ್ತಿಯನ್ನು ಅಣುಶಕ್ತಿಗೆ ಹೋಲಿಸಬಹುದಾಗಿದ್ದು, ಅದನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬಳಸಿದರೆ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಹೇಳಿದರು.
ದೇಶದ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಉದ್ಯೋಗದ ಕೊರತೆಯಿಂದ ಗ್ರಾಮೀಣ ಯುವಜನರು ನಗರಗಳ ಕಡೆ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ 40 ವರ್ಷಗಳಿಂದ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಕ್ಕಳ ಅಭಿವೃದ್ಧಿ, ಯುವಕರ ಸಬಲೀಕರಣ, ಮಹಿಳಾ ಅಭಿವೃದ್ಧಿ, ಸಮುದಾಯ ಆರೋಗ್ಯ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಯುವಜನರಿಗೆ ಹವಾಮಾನ ಬದಲಾವಣೆ ಮತ್ತು ಯುವಜನರು: ಒಂದು ಸಾಮೂಹಿಕ ಜವಾಬ್ದಾರಿ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆರ್‌ಎಲ್‌ಎಚ್‌ಪಿ ಕಾರ್ಯದರ್ಶಿ ಪ್ರೊ.ವಿ.ಕೆ. ಜೋಸ್, ವಿದ್ಯಾವಿಕಾಸ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಂ.ಎನ್.ದಿನೇಶ್, ಸಹಾಯಕ ಪ್ರಾಧ್ಯಾಪಕ ಕೆ.ಎಸ್ ಶಿಲ್ಪ, ಕರ್ನಾಟಕ ಸ್ಟೇಟ್ ಯೂತ್ ನೆಟ್ವಕ್ಸ್ ಸದಸ್ಯರಾದ ಮಹೇಶ್, ಮೆರಿಟೀನಾ ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net