ಸಮಾಜದ ಸಹಕಾರವಿದ್ದರೆ ಸಂಘಟನೆಗೆ ಬಲ

ಕಂಪಲಾಪುರ ಸಮೀಪದ ಕಲ್ಕೆರೆ ಗ್ರಾಮದಲ್ಲಿ ನೂತನ ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘವನ್ನು ಗಣ್ಯರು ಉದ್ಘಾಟಿಸಿದರು. ಮೈಲ್ಯಾಕ್ ಅಧ್ಯಕ್ಷ ಎಚ್ ಡಿ ಗಣೇಶ್, ಸಂಘದ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಪಾಪಣ್ಣ, ನಾಗೇಂದ್ರ ರಂಗಸ್ವಾಮಿ, ಲಕ್ಷ್ಮಣ್ ಬಲರಾಮ್, ರೇವಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಕಂಪಲಾಪುರ ಸಮೀಪದ ಕಲ್ಕೆರೆ ಗ್ರಾಮದಲ್ಲಿ ನೂತನ ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘವನ್ನು ಗಣ್ಯರು ಉದ್ಘಾಟಿಸಿದರು. ಮೈಲ್ಯಾಕ್ ಅಧ್ಯಕ್ಷ ಎಚ್ ಡಿ ಗಣೇಶ್, ಸಂಘದ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಪಾಪಣ್ಣ, ನಾಗೇಂದ್ರ ರಂಗಸ್ವಾಮಿ, ಲಕ್ಷ್ಮಣ್ ಬಲರಾಮ್, ರೇವಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Sangolli Rayanna
ಕಂಪಲಾಪುರ: ಭಕ್ತ ಕನಕದಾಸರು, ಸಂಗೊಳ್ಳಿ ರಾಯಣ್ಣ, ಚಂದ್ರಗುಪ್ತ ಮೌರ್ಯರಂತಹ ಅನೇಕ ಗಣ್ಯರು ನಮ್ಮ ಸಮಾಜದಲ್ಲಿ ಹುಟ್ಟಿ ದೇಶದ ಉದ್ದಗಲಕ್ಕೂ ಹೆಸರು ಮಾಡಿದ್ದಾರೆ ಎಂದು ಮೈಲ್ಯಾಕ್ ಅಧ್ಯಕ್ಷ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಚ್.ಡಿ.ಗಣೇಶ್ ತಿಳಿಸಿದರು.
ಸಮೀಪದ ಕಲ್ಕೆರೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಸೌಹಾರ್ದ, ಸಹಕಾರವಿದ್ದರೆ ಸಂಘಟನೆ ಬಲಗೊಳ್ಳುತ್ತದೆ ಎಂದು ತಿಳಿಸಿದರು.
ಉಪನ್ಯಾಸಕ ನಂಜುಂಡಸ್ವಾಮಿ ಮಾತನಾಡಿ, ಸಂಗೊಳ್ಳಿ ರಾಯಣ್ಣರ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಅವರು ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಎಲ್ಲ ಸಮಾಜಗಳೂ ಮೆಚ್ಚುವ ನಾಯಕರಾಗಿದ್ದಾರೆ ಎಂದರು.
ಕುರುಬ ಸಮಾಜದ ಮುಖಂಡ ತಿಪ್ಪೇಗೌಡ, ದೊಡ್ಡಬೆಲಾಳು ಸಹಕಾರ ಸಂಘದ ಅಧ್ಯಕ್ಷ ಮಹಾದೇವ್, ತಾಪಂ ಮಾಜಿ ಸದಸ್ಯ ರಂಗಸ್ವಾಮಿ, ನಾಗೇಂದ್ರ ಮಾತನಾಡಿದರು. ಕನಕ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಂದ್ರ, ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಾಜೇಗೌಡ, ಗುತ್ತಿಗೆದಾರ ಬಲರಾಮ್, ಕುರುಬ ಸಂಘದ ಕಾರ್ಯದರ್ಶಿ ಸುನಿಲ್, ಮುಖ್ಯ ಶಿಕ್ಷಕ ಶ್ರೀಧರ್, ಎಪಿಎಂಸಿ ಮಾಜಿ ಅಧ್ಯಕ್ಷ ರೇವಣ್ಣ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ, ಸುಂಡವಾಳು ಶಿವಕುಮಾರ್, ಎಂ.ಟಿ. ಕುಮಾರ್, ವಿಎಸ್‌ಎಸ್‌ಎನ್ ನಿರ್ದೇಶಕ ಕೆ.ಎಂ. ಲಕ್ಷ್ಮಣ್, ನಾಗರಾಜ್, ನಂದೀಶ್, ಚಿಕ್ಕೇಗೌಡ, ತಮ್ಮಣ್ಣೇಗೌಡ, ಡಿ. ಸ್ವಾಮಿ ಮತ್ತಿತರರು ಹಾಜರಿದ್ದರು.
ಪದಾಧಿಕಾರಿಗಳ ಆಯ್ಕೆ
ಸಂಗೊಳ್ಳಿ ರಾಯಣ್ಣ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾಗಿ ಸ್ವಾಮಿಗೌಡ, ಅಧ್ಯಕ್ಷರಾಗಿ ಕೆ.ಎಂ.ಜಯಣ್ಣ, ಉಪಾಧ್ಯಕ್ಷರಾಗಿ ಕೆ.ಎಸ್. ಪಾಪಣ್ಣ, ಕಾರ್ಯದರ್ಶಿಯಾಗಿ ಪ್ರಕಾಶ್, ಖಜಾಂಚಿಯಾಗಿ ಪ್ರೇಮ್‌ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಗಂಗಾಧರ್, ಸಂಚಾಲಕರಾಗಿ ಮಾದೇವ್, ನಿರ್ದೇಶಕರಾಗಿ ಪರಮೇಶ್, ಅಶೋಕ, ರಮೇಶ್, ಭಲೇಂದ್ರ, ಮಲ್ಲೇಶ್, ಶಿವಕುಮಾರ್, ಕೆ.ಎಂ.ಮಲ್ಲೇಶ್, ಸಂತೋಷ್, ಪಾಲಾಕ್ಷ ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net