ಧೀಶಕ್ತಿ ನೀಡುವ ಧೀಮಂತ ಹನುಮ

ಹುಣಸೂರು ನಗರದ ಶ್ರೀ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಹನುಮದ್ ವ್ರತ ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಶ್ರೀ ನಟರಾಜ ಸ್ವಾಮೀಜಿ, ಶ್ರೀ ಸಾಂಬಸದಾಶಿವಸ್ವಾಮೀಜಿ,  ವಿ.ಎನ್.ದಾಸ್, ಅನಿಲ್, ಗಿರೀಶ್, ಚಂದ್ರಮೌಳಿ ಇತರರಿದ್ದಾರೆ.
ಹುಣಸೂರು ನಗರದ ಶ್ರೀ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಹನುಮದ್ ವ್ರತ ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಶ್ರೀ ನಟರಾಜ ಸ್ವಾಮೀಜಿ, ಶ್ರೀ ಸಾಂಬಸದಾಶಿವಸ್ವಾಮೀಜಿ, ವಿ.ಎನ್.ದಾಸ್, ಅನಿಲ್, ಗಿರೀಶ್, ಚಂದ್ರಮೌಳಿ ಇತರರಿದ್ದಾರೆ.
Published on
ಹುಣಸೂರು: ಸಮಾಜದಲ್ಲಿನ ಅನಿಷ್ಟಗಳನ್ನು ಹೋಗಲಾಡಿಸಿ ಧೀಶಕ್ತಿಯನ್ನು ನೀಡುವುದೇ ಹನುಮಾನ್ ಶಕ್ತಿಯಾಗಿದೆ ಎಂದು ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜಸ್ವಾಮೀಜಿ ಅಭಿಪ್ರಾಯಪಟ್ಟರು.
ಡಿ.4ರಂದು ಆಯೋಜನೆಗೊಂಡಿರುವ ಹನುಮದ್ ವ್ರತ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಹನುಮಂತೋತ್ಸವ ಸಮಿತಿ ಮತ್ತು ಹಿಂದುಪರ ಸಂಘಟನಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀರಾಮ, ಸೀತೆ ಮತ್ತು ಆಂಜನೇಯಸ್ವಾಮಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಮೂರು ದಶಕಗಳಿಂದ ಹುಣಸೂರಿನಲ್ಲಿ ವಿವಿಧ ಹಿಂದುಪರ ಸಂಘಟನೆಗಳು ಅತ್ಯುತ್ತಮವಾಗಿ ಹನುಮದ್ ವೃತ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ವರ್ಣ, ವರ್ಗ, ಜಾತಿ ಎಲ್ಲವನ್ನೂ ಮೀರಿ ಸಕಲ ಜನರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹನುಮಂತ ಎಲ್ಲರಿಗೂ ಧೀಶಕ್ತಿ ನೀಡುವ ಧೀಮಂತ. ಶ್ರೀರಾಮನ ಮೇಲಿನ ಭಕ್ತಿಯಲ್ಲಿ ದಾಸ. ನಿಷ್ಠೆಯಲ್ಲಿ ಮಾರುತಿಯನ್ನು ಮೀರಿಸುವವರಿಲ್ಲ. ಮೂರು ದಿನಗಳ ಈ ಧಾರ್ಮಿಕ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ನಿರ್ವಿಘ್ನವಾಗಿ ನೆರವೇರಲಿ ಎಂದು ಆಶೀರ್ವದಿಸಿದರು.
ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವಸ್ವಾಮೀಜಿ ಆಶೀರ್ವಚನ ನೀಡಿ, ಆಂಜನೇಯನ ಶಕ್ತಿ ಸಾಮರ್ಥ್ಯ ಸಮಾಜದ ಒಳಿತಿಗಾಗಿ ಮೀಸಲಾಗಿದ್ದು, ಅಂತೆಯೇ ಹನುಮನ ಭಕ್ತರು ಸಮಾಜದ ಒಳಿತಿಗಾಗಿ ದುಡಿಯಲು ಕಂಕಣತೊಡಿರೆಂದರು.
ಕಾರ್ಯಕ್ರಮದಲ್ಲಿ ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಗೌರವಾಧ್ಯಕ್ಷ ಎಚ್.ವೈ.ಮಹದೇವ್, ಪ್ರಧಾನ ಕಾರ್ಯದರ್ಶಿ ಅನಿಲ್, ಪದಾಧಿಕಾರಿಗಳಾದ ಗಿರೀಶ್, ಚಂದ್ರಮೌಳಿ, ತಾಲೂಕು ಬಿಜೆಪಿ ಅಧ್ಯಕ್ಷ ಕಾಂತರಾಜು, ಮುಖಂಡರಾದ ಹನಗೋಡು ಮಂಜುನಾಥ್, ವರದರಾಜ ಪಿಳ್ಳಿ, ವಕೀಲ ಲಕ್ಷ್ಮೀಕಾಂತ್, ಕಿರಣ್ ಕುಮಾರ್, ಅಪ್ಪಣ್ಣ, ಸುಧಾಕರ್, ಪ್ರಕಾಶ್ ಸಿಂಘ್ವಿ, ನಮೋಯೋಗಿ, ಗಿರಿ ಇತರರು ಇದ್ದರು
ಸರಳ ಸುಂದರ ಮೆರವಣಿಗೆ: ಉತ್ಸವ ಮೂರ್ತಿಗಳನ್ನು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮಾರುತಿ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ಸರಸ್ವತಿಪುರಂ, ಕರೀಗೌಡರ ಬೀದಿ, ಮೋಚಿ ಬೀದಿ, ಗಣೇಶನ ಗುಡಿ ರಸ್ತೆ, ದಾವಣಿ ಬೀದಿ, ಕಾಫಿವರ್ಕ್ಸ್ ರಸ್ತೆ ಮೂಲಕ ಮುನೇಶ್ವರ ಕಾವಲ್ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಮನೆಮನೆಗಳಲ್ಲಿ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net