ಸುತ್ತೂರುಶ್ರೀಗಳು ಬಡವರು, ರೈತರ ಆಶಾಕಿರಣ

ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು. ಸುತ್ತೂರು ಶ್ರೀ ಶಿವರಾತ್ರಿ ಕೇಂದ್ರ ಸ್ವಾಮೀಜಿ ಇತರರು ಇದ್ದರು.
ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು. ಸುತ್ತೂರು ಶ್ರೀ ಶಿವರಾತ್ರಿ ಕೇಂದ್ರ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಚ್ಚುಗೆ
ಇಂದು ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಸೇರಿದ್ದಾರೆ. ನಾನು ಸರಿಯಾದ ಸಮಯಕ್ಕೆ ಬಂದರೂ ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದೆ. ಸುತ್ತೂರು ಶ್ರೀಗಳು ಈ ಭಾಗದ ಬಡವರು ಹಾಗೂ ರೈತರ ಆಶಾಕಿರಣವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
 ಸುತ್ತೂರು ಜಾತ್ರೆಯಲ್ಲಿ ನಡೆಯುತ್ತಿರುವ ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ರಸಪ್ರಶ್ನೆ ವಿಭಾಗದಲ್ಲಿ ವಿಜೇತ ರೈತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜಾತ್ರೆ ಎಂದರೆ ಕೇವಲ ಬಂದು ಹೋಗುವುದು ಅಲ್ಲ. ಸತತವಾಗಿ ಆರು ದಿನ ಜಾತ್ರೆಯಲ್ಲಿ ಎಲ್ಲವನ್ನು ಕಾಣಬಹುದು. ಗ್ರಾಮೀಣ ಭಾಗದ ರೈತರು ಅಭಿವೃದ್ಧಿ ಆದರೆ ಮಾತ್ರ ರಾಜ್ಯದ ಅಭಿವೃದ್ಧಿ ಆಗುತ್ತದೆ. ಇಡೀ ರಾಜ್ಯಕ್ಕೆ ಮಾದರಿ ಜಾತ್ರೆ ಎಂದರೆ ಅದು ಸುತ್ತೂರು ಜಾತ್ರೆ. ದೇಶ ಕಾಯುವ ಯೋಧ ಒಂದು ಕಣ್ಣು. ಅನ್ನ ನೀಡುವ ರೈತ ಮತ್ತೊಂದು ಕಣ್ಣು. ರೈತನ ಬದುಕು ಇಂದು ಚಿಂತಾ ಜನಕ ಸ್ಥಿತಿಗೆ ತಲುಪಿದೆ. ವೈಜ್ಞಾನಿಕ ಬೆಲೆಗಳು ಸಿಗುತ್ತಿಲ್ಲ. ಎರಡುವರೆ ವರ್ಷದಲ್ಲಿ 3,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಇತಿಹಾಸದಲ್ಲಿ ರೈತರ ಹೆಸರಿನಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ರೈತ ಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಮೈಸೂರು ಚಾಮರಾಜನಗರ ಭಾಗದ ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಇಂದಿನ ದಿನಗಳಲ್ಲಿ ರೈತರಪರ ಕೆಲಸ ಮಾಡುವ ರಾಜಕಾರಣಿಗಳು ಬೇಕಾಗಿದ್ದಾರೆ. ಸುತ್ತೂರು ಜಾತ್ರೆ ಜಾನಪದ ಸೊಗಡು ಜತೆಗೆ ರೈತನಿಗೂ ಹೊಸ ದಿಕ್ಕನ್ನ ನೀಡುವ ಕೆಲಸವನ್ನು ಸುತ್ತೂರು ಶ್ರೀಗಳು ಮಾಡುತ್ತಿದ್ದಾರೆ ಎಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net