ಶರಣರ ವಿಚಾರಧಾರೆಗಳು ಜೀವನಕ್ಕೆ ದಾರಿ ದೀಪ

 ಬಿಇಎಂಎಲ್ ಬಸವ ಸಮಿತಿಯ 35ನೇ ವಾರ್ಷಿಕೋತ್ಸವದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿ.ಎಸ್.ತಾಂಡವ ಮೂರ್ತಿ, ಜಯಪ್ಪ ಹೊನ್ನಾಳಿ, ಎಸ್.ಎಸ್.ಪಾಟೀಲ್, ಎ.ಕೆ.ವಸಂತಕುಮಾರ್ ಇತರರಿದ್ದರು.
ಬಿಇಎಂಎಲ್ ಬಸವ ಸಮಿತಿಯ 35ನೇ ವಾರ್ಷಿಕೋತ್ಸವದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿ.ಎಸ್.ತಾಂಡವ ಮೂರ್ತಿ, ಜಯಪ್ಪ ಹೊನ್ನಾಳಿ, ಎಸ್.ಎಸ್.ಪಾಟೀಲ್, ಎ.ಕೆ.ವಸಂತಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಎಂಎಲ್ ಕೆಜಿಎಫ್ ಸಂಕೀರ್ಣದ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ತಾಂಡವ ಮೂರ್ತಿ ಅಭಿಮತ
  • ಬಸವ ಜಯಂತಿ ಕಾರ್ಯಕ್ರಮ

ಮೈಸೂರು: 

ಸಾಮಾಜಿಕ ಸಮಸ್ಯೆಗಳಿಗೆ ಶರಣ ತತ್ವದಲ್ಲಿ ಪರಿಹಾರದ ಬೆಳಕು ಇದೆ ಎಂದು ಬಿಇಎಂಎಲ್ ಕೆಜಿಎಫ್ ಸಂಕೀರ್ಣದ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ತಾಂಡವ ಮೂರ್ತಿ ಹೇಳಿದರು.

ಆಯೋಜಿಸಿದ್ದ ಬಿಇಎಂಎಲ್ ಬಸವ ಸಮಿತಿಯ 35ನೇ ವಾರ್ಷಿಕೋತ್ಸವ, ಬಸವ ಜಯಂತಿಯಲ್ಲಿ ಮಾತನಾಡಿದರು.

ಈಗಲೂ ಕಾಡುತ್ತಿರುವ ಅಸಮಾನತೆ, ಜಾತೀಯತೆ, ಮೌಢ್ಯ, ಮೂಢನಂಬಿಕೆಯಂತಹ ಸಮಸ್ಯೆಗಳಿಗೆ ಬಸವಾದಿ ಶರಣ ತತ್ವಗಳಲ್ಲಿ ಪರಿಹಾರ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕು. ಶರಣರ ವಿಚಾರಧಾರೆಗಳು ಜೀವನದ ದಾರಿ ದೀಪ. ಪ್ರತಿಯೊಬ್ಬರೂ ಅದನ್ನು ಅಳವಡಿಸಿಕೊಂಡು ಪಾಲಿಸಬೇಕು ಎಂದರು.
ಮೊದಲು ಕುಟುಂಬದಲ್ಲಿ ಸಮಾನತೆ ತರಬೇಕು. ಪ್ರತಿ ಕಾಯಕದಲ್ಲೂ ಪ್ರಾಮಾಣಿಕತೆ ಇರಲಿ. ಪ್ರತಿಯೊಂದು ದಾಸೋಹದಲ್ಲಿ ಸತ್ವ, ಮಾನವೀಯತೆ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಜಾತಿ-ಮತ, ಮೇಲು-ಕೀಳಿನ ಅಸಮಾನತೆ, ಮೂಢನಂಬಿಕೆ, ಸಾಮಾಜಿಕ ಅನ್ಯಾಯದ ವಿರುದ್ಧ 12ನೇ ಶತಮಾನದಲ್ಲೇ ಬಸವಣ್ಣ ಸೇರಿದಂತೆ ವಚನಕಾರರು ಧೈರ್ಯದಿಂದ ಧ್ವನಿಯೆತ್ತಿದ್ದರು. ಎಲ್ಲರೂ ಸಮಾನರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಸಂದೇಶ ಸಾರಿದರು. ಇದರೊಂದಿಗೆ ಸಮಾನತೆ, ನ್ಯಾಯ ಮತ್ತು ಎಲ್ಲರ ಒಳಿತನ್ನು ಸಾರುವ ಪ್ರಮುಖ ತತ್ವವನ್ನು ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದರು.
ಬಸವಣ್ಣ ಮತ್ತು ಶರಣರು ಕಾಯಕವೇ ಕೈಲಾಸ ಎಂದು ಸಾರಿದರು. ಯಾವುದೇ ಕೆಲಸ ಮೇಲಲ್ಲ, ಕಳಪೆಯಲ್ಲ. ಎಲ್ಲ ಕಾಯಕಗಳೂ ಸಮಾನ. ಶ್ರಮದ ಗೌರವ, ಆತ್ಮವಿಶ್ವಾಸ ಮತ್ತು ಸಮಾನತೆಯನ್ನು ಈ ತತ್ವ ಎತ್ತಿ ಹಿಡಿದರು. 12ನೇ ಶತಮಾನದಲ್ಲಿ ಮಹಿಳೆಯರಿಗೆ ಗೌರವ ಕಲ್ಪಿಸಿಕೊಟ್ಟರು. 
ಅನುಭವ ಮಂಟಪದಲ್ಲಿ ಮಹಿಳೆಯರು ಸೇರಿದಂತೆ ಎಲ್ಲ ಜಾತಿಯವರು ಭಾಗಿಯಾಗಿ ಮುಕ್ತ ಚರ್ಚೆ ನಡೆಸಲು ಅವಕಾಶ ಮಾಡಿಕೊಟ್ಟರು. ಇಲ್ಲಿ ವ್ಯಕ್ತವಾಗಿರುವ ಅನುಭವ, ಅನುಭಾವವೇ ವಚನಗಳಾಗಿ ರೂಪಗೊಂಡಿವೆ ಎಂದು ನುಡಿದರು.
ಮಾಜಿ ಶಾಸಕ ಅಶೋಕ್ ಖೇಣಿ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಿಇಎಂಎಲ್ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕವಿ ಜಯಪ್ಪ ಹೊನ್ನಾಳಿ, ಸಮಿತಿಯ ಅಧ್ಯಕ್ಷ ಎಸ್.ಎಸ್.ಪಾಟೀಲ್, ಪ್ರಧಾನ ಕಾರ್ಯದರ್ಶಿ ಎ.ಕೆ.ವಸಂತಕುಮಾರ್ ಇನ್ನಿತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net