ಸರ್ಕಾರ ಜಾನಪದ ಕಲೆಗೆ ಪ್ರೋತ್ಸಾಹಿಸಲಿ

ಕೆ.ಆರ್.ನಗರ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ 115ನೇ ಸಂಸ್ಥಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ರವಿಶಂಕರ್, ಡಿಂಡಿಮ ಶಂಕರ್, ಜಿ.ಶೇಷಾದ್ರಿ, ಡಾ.ಡಿ.ನಟರಾಜು ಇತರರು ಇದ್ದರು.
ಕೆ.ಆರ್.ನಗರ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ 115ನೇ ಸಂಸ್ಥಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ರವಿಶಂಕರ್, ಡಿಂಡಿಮ ಶಂಕರ್, ಜಿ.ಶೇಷಾದ್ರಿ, ಡಾ.ಡಿ.ನಟರಾಜು ಇತರರು ಇದ್ದರು.
Published on
ಕೆ.ಆರ್.ನಗರ: ಗ್ರಾಮೀಣ ಜಾನಪದ ಕಲೆಗಳು ಇಂದಿಗೂ ಜೀವಂತವಾಗಿದ್ದು, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಸರ್ಕಾರ ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳು ಸಹಕರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್ ಹೇಳಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ 115ನೇ ಸಂಸ್ಥಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಇಡೀ ವಿಶ್ವವೇ ಗೌರವಿಸುತ್ತಿರುವುದು ಬಹಳ ಸಂತೋಷ. ಆದರೆ ಗ್ರಾಮೀಣ ಭಾಗದ ಜಾನಪದ ಕಲೆಗಳಲ್ಲಿ ತೊಗಲು ಗೊಂಬೆ ಪ್ರದರ್ಶನ ನಶಿಸುತ್ತಿರುವುದು ಬೇಸರದ ಸಂಗತಿ. ಸರ್ಕಾರದ ನಿರ್ಲಕ್ಷೃದಿಂದ ಕಲೆಯನ್ನೇ ನಂಬಿರುವ ಕಲಾವಿದರ ಬದುಕು ಬೀದಿಗೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ನಿರ್ಮಾಣಗೊಂಡ ಕೃಷ್ಣರಾಜನಗರ ತಾಲೂಕಿನ ಸಾತಿಗ್ರಾಮದ ಸಂಜೀವಯ್ಯನವರ ಕುಟುಂಬ ಸುಮಾರು 80 ವರ್ಷಗಳಿಂದ ಗ್ರಾಮೀಣ ಭಾಗದ ಜಾನಪದ ಕಲೆಯಾದ ತೊಗಲುಗೊಂಬೆ ಪರಂಪರೆಯನ್ನು ನಡೆಸಿಕೊಂಡು ಬರುತ್ತಿದೆ ಎಂದು ಶ್ಲಾಘಿಸಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಗ್ರಾಮೀಣ ಭಾಗದ ಜಾನಪದ ಕಲಾವಿದರ ಪ್ರೋತ್ಸಾಹಕ್ಕೆ ಮಾಸಾಶನ ಮತ್ತು ಅವರ ಬೇಡಿಕೆಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಸಹಕರಿಸುತ್ತೇನೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಆಯೋಜನೆ ಮಾಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮೊಬೈಲ್ ಜಗತ್ತಿನಲ್ಲಿ ಮುಳುಗಿದ್ದು, ಗ್ರಾಮೀಣ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕಿದೆ ಎಂದರು.
ಮಾಜಿ ಪುರಸಭಾ ಸದಸ್ಯ ಜಿ.ಶೇಷಾದ್ರಿ ಮಾತನಾಡಿ, ನಾಟಕ, ಗ್ರಾಮೀಣ ಕ್ರೀಡೆ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವಂತಹ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ನಮ್ಮ ತಾಲೂಕಿನ ಸಾತಿಗ್ರಾಮದ ಶ್ರೀ ಮಧುಗಿರಿ ಮಾರಮ್ಮ ತೊಗಲು ಗೊಂಬೆ ನಾಟಕ ಮಂಡಳಿ, ಸಂಜೀವಯ್ಯನವರ ಕುಟುಂಬ ಪ್ರಾಚೀನ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ವೈದ್ಯಾಧಿಕಾರಿ ಡಾ.ಡಿ.ನಟರಾಜು ಮಾತನಾಡಿ, ಜಾನಪದ ತೊಗಲುಗೊಂಬೆಯನ್ನು ಮಕ್ಕಳಿಗೆ ತಿಳಿಸುವ ಕೆಲಸವನ್ನು ಹಿರಿಯರು ಮಾಡಬೇಕು. ವಿಶ್ವವೇ ಮೆಚ್ಚುವಂತಹ ನಮ್ಮ ಜಾನಪದ ಕಲೆ ಮತ್ತು ಸಾಹಿತ್ಯ ಇಂದಿಗೂ ನಮ್ಮ ಮೈಸೂರಿನ ಸಾಂಸ್ಕೃತಿಕ ಹಿರಿಮೆಯ ಗರಿಯಾಗಿದೆ. ವಿಶ್ವಮಟ್ಟದಲ್ಲಿ ನಮ್ಮ ಮೈಸೂರು ಜಾನಪದ ಕಲೆಗಳ ತವರೂರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಘಟಕದ ಅಧ್ಯಕ್ಷ ದಯಾನಂದ, ನಗರ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಕನ್ನಡ ಜಾನಪದ ಪರಿಷತ್‌ನ ತಿಮ್ಮಶೆಟ್ಟಿ, ಸಾಹಿತ್ಯ ಪರಿಷತ್ ಸಮಿತಿಯ ಉದಯಕುಮಾರ್, ಭಾಸ್ಕರ್, ನಿವೃತ್ತ ಉಪನ್ಯಾಸಕ ಕೃಷ್ಣ, ರಾಮಕೃಷ್ಣ, ಮಹದೇವ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕೆ.ಎನ್.ಪ್ರಸನ್ನಕುಮಾರ್, ಸಂಪತ್ತುಕುಮಾರ್, ಶಿಕ್ಷಕಿ ಭಾರತಿ, ನಾಗರತ್ನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net