ಸಂಸ್ಥೆಯ ಹಳೆಯ ವಿದ್ಯಾರ್ಥಿ, ಬ್ರಿಗೇಡ್ ಗ್ರೂಪ್ ಸಂಸ್ಥಾಪಕ ಎಂ.ಆರ್.ಜಯಶಂಕರ್ ಮಾತನಾಡಿ, ಬೀಮ್ಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿ ನಾನು. ರೈತ ಕುಟುಂಬದಿಂದ ಬಂದ ನಾನು ಈ ವಿಭಾಗಕ್ಕೆ ಕಾರ್ಪೋರೇಟ್ ಕೋಟಾದಲ್ಲಿ ದಾಖಲಾಗಿದ್ದೆ. ವಿದ್ಯಾರ್ಥಿದೆಸೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯ, ಕ್ಯಾಂಟೀನ್, ಹಾಸ್ಟೆಲ್ ಸೇರಿದಂತೆ ವಿವಿಧೆಡೆ ಓಡಾಡಿದ ನೆನಪು, ಸಹಪಾಠಿ, ಪ್ರಾಧ್ಯಾಪಕರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.