ಉಚಿತ ಆಯುರ್ವೇದ ತಪಾಸಣಾ ಶಿಬಿರ

ತಿ.ನರಸಿಪುರ ತಾಲೂಕಿನ ಟಿ.ದೊಡ್ಡಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಉಚಿತ ಆಯುಷ್ ಹಾಗೂ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಡಾ. ಚಂದ್ರಶೇಖರ್, ಡಾ.ಕೆ.ಜಿ.ಶ್ರುತಿಮೋಳ್, ಎನ್.ಮರಿಸ್ವಾಮಿ, ಪಿ.ಕುಮಾರ್, ಶಿವಕುಮಾರ್, ಶಿವಣ್ಣ ಇತರರು ಇದ್ದರು.
ತಿ.ನರಸಿಪುರ ತಾಲೂಕಿನ ಟಿ.ದೊಡ್ಡಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಉಚಿತ ಆಯುಷ್ ಹಾಗೂ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಡಾ. ಚಂದ್ರಶೇಖರ್, ಡಾ.ಕೆ.ಜಿ.ಶ್ರುತಿಮೋಳ್, ಎನ್.ಮರಿಸ್ವಾಮಿ, ಪಿ.ಕುಮಾರ್, ಶಿವಕುಮಾರ್, ಶಿವಣ್ಣ ಇತರರು ಇದ್ದರು.
Published on
ತಿ.ನರಸೀಪುರ : ತಾಲೂಕಿನ ಟಿ.ದೊಡ್ಡಪುರ ಗ್ರಾಮದ ಗ್ರಾಪಂ ಆವರಣದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಮತ್ತು ಗ್ರಾಮೀಣ ಫೌಂಡೇಷನ್ ಆಫ್ ಕರ್ನಾಟಕ ಟ್ರಸ್ಟ್‌ನಿಂದ ಆಯೋಜಿಸಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಯಿತು.
ಆಯುರ್ವೇದ ವೈದ್ಯಕೀಯ ಚಿಕಿತ್ಸಾ ಪದ್ಧತಿಯ ಮಹತ್ವವನ್ನು ಗ್ರಾಮೀಣ ಜನರಿಗೆ ತಿಳಿಸಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಉಚಿತ ಆಯುಷ್ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ತಜ್ಞ ವೈದ್ಯರು ಕಣ್ಣು, ಕಿವಿ, ಮೂಗು, ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಮಂಡಿ ನೋವು ಮತ್ತು ಬೆನ್ನು ನೋವು ಸಮಸ್ಯೆ ಇರುವ 500ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಲಾಯಿತು. ಬಳಿಕ ಉಚಿತವಾಗಿ ಔಷಧ ವಿತರಿಸಲಾಯಿತು.
ಕಣ್ಣಿನ ಪೊರೆ, ದೂರ ದೃಷ್ಟಿ, ಸಮೀಪ ದೃಷ್ಟಿ, ಗ್ಲಾಕೋಮಾ, ನೀರು ಸೋರುವಿಕೆ, ರಾತ್ರಿ ಅಂಧತ್ವ ಸೇರಿದಂತೆ ಕಣ್ಣಿನ ಸಮಸ್ಯೆಗಳನ್ನು ಪರೀಕ್ಷಿಸಿ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಅಲ್ಲದೆ ಮೈಸೂರಿನ ಸ್ಪಂದನ ಆಸ್ಪತ್ರೆ ವತಿಯಿಂದ ಉಚಿತವಾಗಿ ಬಿಪಿ ಸೇರಿದಂತೆ ಸಕ್ಕರೆ ಕಾಯಿಲೆ ಮತ್ತು ಇಸಿಜಿ ತಪಾಸಣೆ ಮಾಡಲಾಯಿತು.
ಶಿಬಿರ ಉದ್ಘಾಟಿಸಿದ ಹಿರಿಯ ಆಯುಷ್ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಭಾಗದ ಜನರು ಆರೋಗ್ಯದ ಕಡೆ ಹೆಚ್ಚು ನಿಗಾ ವಹಿಸುವುದಿಲ್ಲ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಆರೋಗ್ಯ ಕ್ಷೀಣಿಸುತ್ತಿದೆ. ಹಾಗಾಗಿ ಗ್ರಾಮೀಣ ಜನರಲ್ಲಿ ಅರೋಗ್ಯದ ಪಾಲನೆ, ಕಾಳಜಿ ಮತ್ತು ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ಉಚಿತ ಅರೋಗ್ಯ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಹಲವು ರೀತಿಯ ಸಮಸ್ಯೆಯುಳ್ಳ ನೂರಾರು ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದರು.
ಆಯುರ್ವೇದ ಕ್ಯಾನ್ಸರ್ ಮತ್ತು ನೇತ್ರ ತಜ್ಞ ಡಾ.ಪಿ ಕೆ.ಜಿ.ಶ್ರುತಿಮೋಳ್, ವೈದ್ಯರಾದ ಡಾ.ಸದಾನಂದ ಪರಗೊಂಡೆ, ಡಾ.ಆದಿತ್ಯ ಕಶ್ಯಪ್, ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಟ್ರಸ್ಟ್ ಅಧ್ಯಕ್ಷ ಎನ್.ಮರಿಸ್ವಾಮಿ (ಕುಮಾರ್ ), ಬಿಲ್ ಕಲೆಕ್ಟರ್ ಸಂಕೇಶ್, ಗ್ರಾಮೀಣ ಫೌಂಡೇಶನ್ ಆಫ್ ಕರ್ನಾಟಕ ಟ್ರಸ್ಟ್‌ನ ಟ್ರಸ್ಟಿಗಳಾದ ಸತೀಶ್, ನಿಂಗರಾಜು, ಶಿವಣ್ಣ, ಸಿದ್ದರಾಜು, ವನಜಾಕ್ಷಿ, ಮಲ್ಲಿಕಾ, ಹಿರಿಯೂರು ಶಿವಕುಮಾರ್(ಸತ್ಯರಾಜ್), ಪಿ.ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net