ಯುವ ಪೀಳಿಗೆಗೆ ಸಂಸ್ಕೃತ ಕಲಿಸಿ

ವಿಜ್ಞಾನಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ‘ದರ್ಶನೇಷು ಖ್ಯಾತಿಸ್ವರೂಪ ವಿಮಶರ್ಃ’ ಕುರಿತಾದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಮಾತನಾಡಿದರು.
ವಿಜ್ಞಾನಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ‘ದರ್ಶನೇಷು ಖ್ಯಾತಿಸ್ವರೂಪ ವಿಮಶರ್ಃ’ ಕುರಿತಾದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಕರೆ
ಮೈಸೂರು: ಸಂಸ್ಕೃತ ಸಾಹಿತ್ಯ ಕುರಿತು ಸಂಸ್ಕೃತ ವಿದ್ವಾಂಸರು ಮತ್ತಷ್ಟು ಸಂಶೋಧನೆ ನಡೆಸಬೇಕು ಎಂದು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
ದೆಹಲಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಹಾಗೂ ಶ್ರೀ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನಮ್ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ವಿಜ್ಞಾನಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ದರ್ಶನೇಷು ಖ್ಯಾತಿಸ್ವರೂಪ ವಿಮರ್ಶಃ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಕೃತ ವಿದ್ವಾಂಸರು ಸಂಸ್ಕೃತ ಭಾಷೆಯಲ್ಲಿ ಸಂಶೋಧನೆ ನಡೆಸುವ ಮೂಲಕ ಸಂಸ್ಕೃತ ಸಾಹಿತ್ಯವನ್ನು ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಬೇಕು. ಜತೆಗೆ ಇಂತಹ ವಿಚಾರ ಗೋಷ್ಠಿಗಳು ನಡೆಯಬೇಕು. ಆ ಮೂಲಕ ಸಂಸ್ಕೃತ ಜ್ಞಾನದ ಅರಿವು ಮೂಡಬೇಕಿದೆ ಎಂದರು.
ಸಂಸ್ಕೃತ ಸಾಹಿತ್ಯ ಉಳಿಸಿ ಅಭಿವೃದ್ಧಿ ಪಡಿಸಬೇಕಿದೆ. ಯುವ ಪೀಳಿಗೆ ಸಂಸ್ಕೃತವನ್ನು ಕಲಿಯಬೇಕು. ಇದರೊಂದಿಗೆ ಸಂಸ್ಕೃತ ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಹಕಾರ ಕೊಡಬೇಕು ಎಂದರು.
ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜ ರಾವ್ ಮಾತನಾಡಿ, ವಿದೇಶಗಳಲ್ಲಿ ಸಂಸ್ಕೃತ ಸಾಹಿತ್ಯವನ್ನು ಪಸರಿಸುವ ಕಾರ್ಯವನ್ನು ಮಾಡಬೇಕಿದ್ದು,  ವಿದ್ವಾಂಸರು ವಿದೇಶಕ್ಕೆ ತೆರಳಿ ಅಲ್ಲಿನ ಭಾಷೆಗಳಿಗೆ ಸಂಸ್ಕೃತ ಅನುವಾದ ಮಾಡಬೇಕು. ಇದರಿಂದ ಸಂಸ್ಕೃತ ಭಾಷೆಯನ್ನು ವಿದೇಶಿಗರಿಗೆ ಪರಿಚಯಿಸಬೇಕಿದೆ ಎಂದರು.
ಮೈವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ, ಶ್ರೀವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನಮ್ ನಿರ್ದೇಶಕ ಡಾ.ಎ.ವಿ.ನಾಗಸಂಪಿಗೆ, ವಿದ್ವಾಂಸ, ಡಾ.ಕೃಷ್ಣ ಎ.ನಾಗಸಂಪಿಗೆ, ವಿದ್ವಾಂಸ ಡಾ.ವಂಶಿಕೃಷ್ಣ, ಉದ್ಯಮಿ ಎಚ್.ಆರ್.ನಾಗೇಂದ್ರ ರಾವ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net