

ಜಾಗತಿಕ ಮಟ್ಟದಲ್ಲಿ ಕರ್ನಾಟಕದ ತಂತ್ರಜ್ಞಾನ ನಾಯಕತ್ವವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಪ್ರಮುಖ ಟೆಕ್ ಇಕೋಸಿಸ್ಟಮ್ ಸಂಸ್ಥೆಯಾದ ಗುಡ್ ವರ್ಕ್ಸ್ ಗ್ರೂಪ್ ನಡುವೆ ಬೃಹತ್ ಪಾಲುದಾರಿಕೆ ಒಪ್ಪಂದ ಏರ್ಪಟ್ಟಿದೆ.
ಈ ನಿಟ್ಟಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಈ ಐತಿಹಾಸಿಕ ಒಪ್ಪಂದದ ಮೂಲಕ ರಾಜ್ಯಕ್ಕೆ ಕನಿಷ್ಠ ₹5,000 ಕೋಟಿ ರೂಪಾಯಿಗಳ ಹೊಸ ಹೂಡಿಕೆಯನ್ನು ಆಕರ್ಷಿಸುವ ಹಾಗೂ 50 ಹೊಸ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳನ್ನು (ಜಿಸಿಸಿ) ಸ್ಥಾಪಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.
ಐಟಿ ಸೇವಾ ಕ್ಷೇತ್ರಕ್ಕೆ ಕಾರ್ಯತಂತ್ರದ ಅನುಕೂಲ: ಇಕೋಸಿಸ್ಟಮ್ ಪಾಲುದಾರಿಕೆಗಳು ಹೆಚ್ಚಿನ ಔಟ್‌ಸೋರ್ಸಿಂಗ್‌ಗೆ ಕಾರಣವಾಗಲಿವೆ