ರೈತರು ಹನೂರು ತಾಲೂಕಿನವರಾಗಿರಬೇಕು. ಬೆಳಗ್ಗೆ 6.30 ಗಂಟೆ ಹಾಗೂ ಸಂಜೆ 5.30ಕ್ಕೆ ಕರೆದ ಹಾಲನ್ನು ತೂಕ ಮಾಡಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಒಮ್ಮೆ ಸ್ಪರ್ಧೆ ಆವರಣಕ್ಕೆ ಕರೆ ತಂದು ಹಸುಗಳನ್ನು ಇಲ್ಲಿಯೇ ಇರಿಸಬೇಕು. ಯಾವುದೇ ಕಾರಣಕ್ಕೂ ಹಸುವನ್ನು ಮನೆಗೆ ಕರೆದೊಯ್ಯುವಂತಿಲ್ಲ. ಹಸುಗಳಿಗೆ ಮೇವು, ತಿಂಡಿ ಹಾಗೂ ನೀರಿನ ಬಕೆಟ್‌ಅನ್ನು ಮಾಲೀಕರೇ ತರಬೇಕು. ಇದು ಸ್ಪರ್ಧೇಯ ನಿಯಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯ ಸಂಸ್ಥೆ ಹಾಗೂ ಮೊಬೈಲ್ ಸಂಖ್ಯೆ ಮೊ: 7760550605ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.