ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್‌ನಿಂದ ಶಾರದಾದೇವಿನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ.ಈ.ಸಿ.ನಿಂಗರಾಜ್‌ಗೌಡ, ವೈ.ವಿ.ಮುರಳೀಧರ, ಸುರೇಶ್, ಎಂ.ಮೋಹನ್, ವೆಂಕಟೇಶ್, ವಾಸುದೇವನ್, ಗೋವರ್ಧನ್ ಯಾದವ್, ಎಂ.ಆರ್.ಸಾಲಿಯಾನ್, ಜಿ.ವಿ.ಪಿಂಟೋ, ಮುರಳಿ, ಗಣವಂತ ಇತರರು ಇದ್ದರು.
ಪುರಸ್ಕಾರವು ಕೇವಲ ಬಹುಮಾನವಲ್ಲ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಸಾಧನ
ಜ್ಞಾನಸಮೃದ್ಧ ಸಮಾಜ ನಿರ್ಮಾಣವೇ ಇದರ ಪ್ರಮುಖ ಗುರಿಯಾಗಿದೆ
ಮೈಸೂರು:ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಅಗತ್ಯ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.
ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್‌ನಿಂದ ಶಾರದಾದೇವಿನಗರದ ರೋಟರಿ ಎಸಿಎಂಇ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.
ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ. ಈಗಿನ ವಿದ್ಯಾರ್ಥಿಗಳ ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ. ವಿದ್ಯಾರ್ಥಿಗಳು ತಮ್ಮ ಪಠ್ಯದ ಜತೆಗೆ ತಮಗೆ ಇಷ್ಟವಾಗುವ ಕನಿಷ್ಠ ಇಬ್ಬರು ಮಹಾಪುರುಷರ ಜೀವನ ಚರಿತ್ರೆಯನ್ನು ಓದಬೇಕು. ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಸರ್ ಎಂ.ವಿಶ್ವೇಶರಯ್ಯ, ಡಾ.ಎಸ್. ರಾಧಾಕೃಷ್ಣನ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಕುವೆಂಪು, ಬೇಂದ್ರೆ, ಬಸವಣ್ಣ ಮುಂತಾದವರ ಜೀವನವನ್ನೂ ತಿಳಿದುಕೊಳ್ಳುವ ಮೂಲಕ ಅವರ ತತ್ತ್ವ ಆದರ್ಶಗಳನ್ನೂ ನಾವೆಲ್ಲರೂ ಪಾಲಿಸಬೇಕು ಎಂದರು.
ಪುರಸ್ಕಾರವು ಕೇವಲ ಬಹುಮಾನವಲ್ಲ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಹಾಗೂ ಮತ್ತಷ್ಟು ಸಾಧನೆಗೆ ಸ್ಫೂರ್ತಿ ನೀಡುವ ಒಂದು ಸಾಮಾಜಿಕ ಜವಾಬ್ದಾರಿಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಸಮಾನ ಅವಕಾಶ ಒದಗಿಸುವ ಮೂಲಕ ಜ್ಞಾನಸಮೃದ್ಧ ಸಮಾಜ ನಿರ್ಮಾಣವೇ ಇದರ ಪ್ರಮುಖ ಗುರಿಯಾಗಿದೆ ಎಂದರು.
ಪ್ರತಿಭೆಗೆ ಪ್ರೋತ್ಸಾಹ ಶಿಕ್ಷಣಕ್ಕೆ ಗೌರವ ಎಂಬ ಧ್ಯೇಯದೊಂದಿಗೆ ನಡೆಯುವ ಈ ಕಾರ್ಯಕ್ರಮವು ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನು ಹೆಚ್ಚಿಸುವ ಮಹತ್ತರ ಪ್ರಯತ್ನವಾಗಿದೆ. ಪ್ರತಿಭೆ ಗುರುತಾದಾಗ ಸಾಧನೆಗೆ ಹೊಸ ದಾರಿ ತೆರೆದುಕೊಳ್ಳುತ್ತದೆ. ಎಂದರು.
ಇಂದಿನ ಪ್ರತಿಭಾವಂತರೇ ನಾಳಿನ ದೇಶದ ಭವಿಷ್ಯ ಎಂಬ ಸಂದೇಶದೊಂದಿಗೆ ಈ ಪುರಸ್ಕಾರ ಕಾರ್ಯಕ್ರಮ ಸಮಾಜದಲ್ಲಿ ಜ್ಞಾನ, ಸಂಸ್ಕಾರ ಮತ್ತು ಸಾಧನೆಯ ಮೌಲ್ಯಗಳನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್‌ನಿಂದ ಹತ್ತನೆಯ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ರೋಟರಿ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.
ರೋಟರಿ ಮೈಸೂರು ಸೌತ್ ಈಸ್ಟ್ ಅಧ್ಯಕ್ಷ ವೈ.ವಿ.ಮುರಳೀಧರ, ಕಾರ್ಯದರ್ಶಿ ಸುರೇಶ್, ರೋಟರಿ ಸಂಸ್ಥೆಯ ಎಂ.ಮೋಹನ್, ವೆಂಕಟೇಶ್, ವಾಸುದೇವನ್, ಗೋವರ್ಧನ್ ಯಾದವ್, ಎಂ.ಆರ್.ಸಾಲಿಯಾನ್, ಜಿ.ವಿ.ಪಿಂಟೋ, ಮುರಳಿ, ಗಣವಂತ, ರವೀಂದ್ರ, ಎಸಿಎಂಇ ಶಾಲೆಯ ಚೇರ್ಮನ್ ಡಾ.ಶರತ್ ಕುಮಾರ್, ಶಿಕ್ಷಕರು, ಪಾಲಕರು ಇದ್ದರು.