ಉಪನೋಂದಣಾಧಿಕಾರಿ ಅಮಾನತು

ಅಮಾನತು
ಅಮಾನತು
Published on

ಪ್ರಮುಖ ಮುಖ್ಯಾಂಶಗಳು

  • ಕಾನೂನುಬಾಹಿರವಾಗಿ ದಾಸ್ತಾವೇಜುಗಳನ್ನು ನೋಂದಣಿ ಮಾಡಿ ಕರ್ತವ್ಯಲೋಪ ಎಸಗಿರುವ ಆರೋಪ
ಮೈಸೂರು: ಕಾನೂನುಬಾಹಿರವಾಗಿ ದಾಸ್ತಾವೇಜುಗಳನ್ನು ನೋಂದಣಿ ಮಾಡಿ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಪಶ್ಚಿಮ ಉಪನೋಂದಣಿ ಕಚೇರಿಯ ಉಪನೋಂದಣಾಧಿಕಾರಿ ಎನ್.ಶ್ರೀಕಾಂತ್ ಅವರನ್ನು ಅಮಾನತು ಮಾಡಲಾಗಿದೆ.
2025ರ ಡಿಸೆಂಬರ್‌ನಲ್ಲಿ ಪಶ್ಚಿಮ ಉಪನೋಂದಣಿ ಕಚೇರಿಯಲ್ಲಿ ಉಪನೋಂದಣಾಧಿಕಾರಿಯಾಗಿದ್ದ ಶ್ರೀಕಾಂತ್ ಹಾಗೂ ಅಲ್ಲಿನ ಕಚೇರಿಯ ಸಿಬ್ಬಂದಿ ಶಾಮೀಲಾಗಿ ಮೈಸೂರು ತಾಲೂಕಿನ ಕೇರ್ಗಳ್ಳಿ ಗ್ರಾಮಕ್ಕೆ ಸೇರಿದ 22 ನಿವೇಶನಗಳ ದಾಸ್ತಾವೇಜುಗಳನ್ನು ಅಕ್ರಮವಾಗಿ ಸಂಪಾದಿಸಿ ತಿದ್ದುಪಡಿ ಮಾಡಿದ್ದರು. 
ಜತೆಗೆ, ಕಾನೂನು ಬಾಹಿರವಾಗಿ ನಿವೇಶನಗಳ ಮಾಲೀಕರಲ್ಲದವರನ್ನು ಕೂರಿಸಿ ನೋಂದಣಿ ಮಾಡಿಸುವ ಕಾರ್ಯಕ್ಕೆ ಮುಂದಾಗಿದ್ದರು.
 ಇದಕ್ಕೆ ಪೂರ್ವ ತಯಾರಿಯಾಗಿ ನೋಂದಣಿಗಾಗಿ ದಿನಾಂಕ ಪಡೆಯಲು ದಾಸ್ತಾವೇಜುಗಳನ್ನು ಅಪ್ಲೋಡ್ ಮಾಡಿ ಸಂಬಂಧಿತ ನಿವೇಶನಗಳ ಮಾಲೀಕರ ಆಧಾರ್ ಮತ್ತು ಒಟಿಪಿಯನ್ನು ಬಳಸದೆ ಅವರ ಅರಿವಿಗೆ ಬಾರದ ರೀತಿಯಲ್ಲಿ ನೋಂದಣಿ ಮಾಡಲಾಗಿತ್ತು. 
ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗಿತ್ತು. ಕರ್ತವ್ಯ ಲೋಪ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಮಾಜಿ ಸಿದ್ದರಾಜು ಕಂದಾಯ ಇಲಾಖೆ ಗಮನಕ್ಕೆ ತಂದಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ ಕಂದಾಯ ಸಚಿವರನ್ನು ಭೇಟಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net