ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

ಕೆ.ಆರ್.ನಗರದ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶ್ರೀಕಾಂತ್‌ನನ್ನು ಬಂಧಿಸಲಾಗಿದೆ. ವೈ.ಎಸ್.ಲೋಕೇಶ್, ಸಿ.ವಿ.ರಾಘವೇಂದ್ರ, ಎನ್.ದಿನೇಶ, ಕೆ.ಪಿ.ಶಿವಕುಮಾರ, ಶಿವಪ್ಪ ಭಾನುಸಿ, ಕೆ.ಮಹದೇವ ಇದ್ದರು.
ಕೆ.ಆರ್.ನಗರದ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶ್ರೀಕಾಂತ್‌ನನ್ನು ಬಂಧಿಸಲಾಗಿದೆ. ವೈ.ಎಸ್.ಲೋಕೇಶ್, ಸಿ.ವಿ.ರಾಘವೇಂದ್ರ, ಎನ್.ದಿನೇಶ, ಕೆ.ಪಿ.ಶಿವಕುಮಾರ, ಶಿವಪ್ಪ ಭಾನುಸಿ, ಕೆ.ಮಹದೇವ ಇದ್ದರು.
Published on
ಕೆ.ಆರ್.ನಗರ: ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಇತ್ತೀಚೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ, 216 ಗ್ರಾಂ ತೂಕದ ಬೀಜ, ತೆನೆ, ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಹಂಪಾಪುರ ಗ್ರಾಮದ ಶ್ರೀಕಾಂತ ಬಂಧಿತ ಆರೋಪಿ. ಪಟ್ಟಣದ ಹಾಸನ-ಮೈಸೂರು ಮುಖ್ಯ ರಸ್ತೆಯಲ್ಲಿರುವ ತೋಪಮ್ಮ ದೇವಸ್ಥಾನದ ರಸ್ತೆಯ ಬಳಿ ಗಸ್ತು ನಡೆಸುತ್ತಿದ್ದಾಗ ಕೆ.ಆರ್.ನಗರ-ಮೈಸೂರು ಮುಖ್ಯ ರಸ್ತೆಯಿಂದ ವಿನಾಯಕ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಹಳೆಯ ತಹಸೀಲ್ದಾರ್ ನಿವಾಸದ ಗೇಟ್‌ನ ಮುಂಭಾಗ ಶ್ರೀಕಾಂತ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಮೈಸೂರು ವಿಭಾಗ ಜಂಟಿ ಆಯುಕ್ತ ಬಸವರಾಜ ಹಡಪದ, ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತರು ಶ್ರೀರಂಗಪ್ಪ, ಹುಣಸೂರು ಉಪ ವಿಭಾಗದ ಅಬಕಾರಿ ಉಪಅಧಿಕ್ಷಕ ಎಂ.ಡಿ.ಮೊಹನಕುಮಾರ್ ನಿರ್ದೇಶನದ ಮೇರೆಗೆ ದಾಳಿ ಮಾಡಲಾಗಿದೆ.
ದಾಳಿಯಲ್ಲಿ 216 ಗ್ರಾಂ ತೂಕದ ಬೀಜ, ತೆನೆ, ಒಣ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ದಾಳಿ ಕಾರ್ಯಾಚರಣೆಯಲ್ಲಿ ಕೆ.ಆರ್.ನಗರ ವಲಯ ಕಚೇರಿಯ ಅಬಕಾರಿ ಉಪ ನಿರೀಕ್ಷಕ ಸಿ.ವಿ.ರಾಘವೇಂದ್ರ, ಎನ್.ದಿನೇಶ, ಮುಖ್ಯಪೇದೆ ಕೆ.ಪಿ.ಶಿವಕುಮಾರ, ಶಿವಪ್ಪ ಭಾನುಸಿ, ಚಾಲಕ ಕೆ.ಮಹದೇವ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net