ಕಾಕ್ರೋಚ್ ಜತನಾ ಪಾರ್ಟಿಗೆ ಬೆಂಬಲ

ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಶನಿವಾರ ಪುರಭವನದ ಎದುರು ಪ್ರತಿಭಟನೆ ನಡೆಸಿದರು. ಪ್ರೊ.ಕಾಳಚನ್ನೇಗೌಡ, ದೇವಗಳ್ಳಿ ಸೋಮಶೇಖರ್, ಸವಿತಾ ಪ.ಮಲ್ಲೇಶ್ ಇತರರು ಇದ್ದರು.
ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಶನಿವಾರ ಪುರಭವನದ ಎದುರು ಪ್ರತಿಭಟನೆ ನಡೆಸಿದರು. ಪ್ರೊ.ಕಾಳಚನ್ನೇಗೌಡ, ದೇವಗಳ್ಳಿ ಸೋಮಶೇಖರ್, ಸವಿತಾ ಪ.ಮಲ್ಲೇಶ್ ಇತರರು ಇದ್ದರು.
Published on
ನೀಟ್ ಹಾಗೂ ಸಿಬಿಎಸ್‌ಇ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಯುವಜನರ ಚಳವಳಿಗೆ ಬೆಂಬಲ ಸೂಚಿಸಿ ನಗರದ ಪುರಭವನದ ಎದುರು ವಿವಿಧ ಸಂಘಟನೆಗಳು ಶನಿವಾರ ಪ್ರತಿಭಟನೆ ಮಾಡಿದವು.
ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾವಣೆಗೊಂಡ ಪ್ರಗತಿಪರ ಸಂಘಟನೆಗಳ ಮುಖಂಡರು, ಚಿಂತಕರು, ಸಾಹಿತಿಗಳು ಹಾಗೂ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಯುವಜನರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ದಮನಿತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುವ ಪರ್ಯಾಯ ರಾಜಕೀಯದ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಯುಜನರನ್ನು ಸಂಘಟಿಸುವ ಕಾಕ್ರೋಚ್ ಜನತಾ ಪಾರ್ಟಿ ಚಳವಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಪ್ರೊ.ಕಾಳಚನ್ನೇಗೌಡ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ದೇವಗಳ್ಳಿ ಸೋಮಶೇಖರ್, ಹೋರಾಟಗಾರ್ತಿ ಸವಿತಾ ಪ.ಮಲ್ಲೇಶ್, ಪ್ರಗತಿಪರ ಚಿಂತಕ ಡಾ.ಮಾ.ಪು. ಪೂರ್ಣಾನಂದ, ಪ್ರಮುಖರಾದ ಡಾ.ರತಿರಾವ್, ವರದಯ್ಯ, ಪ್ರೊ.ಕುಮಾರಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net