ಚಿತ್ರಕಲೆ, ಕರಕುಶಲ ಕಲೆ,ಯೋಗ ಮತ್ತು ವ್ಯಾಯಾಮ, ನಾಟಕಾಭ್ಯಾಸ, ಕಥೆ ಹೇಳುವಿಕೆ ಮತ್ತು ಪಠಣ, ಸಂಗೀತ, ನೃತ್ಯ ಆಟಗಳು ನಡೆಯುತ್ತವೆ. ಶಿಬಿರದ ಕೊನೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆಸುವುದು ಬಹಳ ಪರಿಣಾಮಕಾರಿ. ಇದರಿಂದ ಮಕ್ಕಳಲ್ಲಿ ಅಭಿನಯ ಕೌಶಲ ಬೆಳೆಸುವುದು. ಸಭಾಕಂಪನ ನಿವಾರಣೆ, ತಂಡದ ಸಹಕಾರ ಮನೋಭಾವ, ನಾಯಕತ್ವ ಗುಣ, ಸಂವಹನ ಕೌಶಲ, ಸೃಜನಶೀಲತೆ ಬೆಳೆಯುತ್ತದೆ. ಶಿಸ್ತು ಮತ್ತು ಸಮಯಪಾಲನೆ ಕಲಿಯುತ್ತಾರೆ ಎಂದು ಹೇಳಿದರು.